alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕುರಿತ ಆತಂಕಕ್ಕೆ ಖ್ಯಾತ ಪತ್ರಕರ್ತ ಹೇಳಿದ್ದೇನು…?

ಕಳೆದ ಕೆಲ ವರ್ಷಗಳಿಂದ ಆಧಾರ್ ಬಳಕೆ ಹೆಚ್ಚಾಗಿದೆ. ಬಯೋಮೆಟ್ರಿಕ್ಸ್, ಪ್ರೈವೆಸಿ ಸೇರಿದಂತೆ ಹಲವು ವಿಚಾರಕ್ಕಾಗಿ 2017ರಲ್ಲಿ ಆಧಾರ್ ಕಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿದೆ. ಅಂತರಾಷ್ಟ್ರೀಯ ಹ್ಯಾಕರ್ ಗಳಿಂದ ಜನರ ಗೌಪ್ಯತೆ ಮತ್ತು ಪಾರದರ್ಶಕತೆ ಎರಡನ್ನೂ ಕಾಪಾಡುವುದು ಸರ್ಕಾರದ ಮುಂದಿರುವ ಸವಾಲು.

ಅಮೆರಿಕದ ಖ್ಯಾತ ಪತ್ರಕರ್ತ ಥಾಮಸ್ ಫ್ರೈಡ್ಮನ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆಧಾರ್ ಭಾರತದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿಯಾಗಲಿದೆ ಎನ್ನುತ್ತಾರೆ ಅವರು. ನಂಬಿಕಸ್ಥ ಐಡಿ ಉಳ್ಳ ಪ್ಲಾಟ್ ಫಾರ್ಮ್ ಸಮಾಜಕ್ಕೆ ಬೇಕು, ಆದ್ರೆ ಪ್ರೈವೆಸಿ ಬಗ್ಗೆ ಎದ್ದಿರೋ ಊಹಾಪೋಹ ಬೋಗಸ್ ಅಂತಾ ಹೇಳಿದ್ದಾರೆ.

ನಿಮ್ಮ ಬಯೋಮೆಟ್ರಿಕ್ಸ್ ಒಂದನ್ನು ಬಿಟ್ರೆ ಇನ್ಯಾವ ದಾಖಲೆಯೂ ಆಧಾರ್ ನಲ್ಲಿ ಸ್ಟೋರ್ ಆಗಿರುವುದಿಲ್ಲ. ಹಾಗಾಗಿ ಅದು ನಿಮ್ಮನ್ನು ಟ್ರ್ಯಾಕ್ ಮಾಡುತ್ತದೆ ಅನ್ನೋದ್ರಲ್ಲಿ ಅರ್ಥವಿಲ್ಲ. ಫೇಸ್ಬುಕ್ ನಿಮ್ಮನ್ನು ಟ್ರ್ಯಾಕ್ ಮಾಡ್ತಿದೆ, ಗೂಗಲ್, ಫೇಸ್ಬುಕ್, ಟ್ವಿಟ್ಟರ್ ಬಳಕೆಯೇ ಅಪಾಯಕಾರಿ ಅನ್ನೋದು ಫ್ರೈಡ್ಮನ್ ಅವರ ಅಭಿಪ್ರಾಯ. ಆಧಾರ್ ಬಗ್ಗೆ ಆತಂಕ ಬೇಡ ಅಂತಾ ಸ್ಪಷ್ಟಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...