alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಿನ ನಂಬರ್ ಪ್ಲೇಟ್ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಎಫ್ 1 ಅನ್ನೋದು ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧವಾದ ನಂಬರ್ ಅನ್ನೋದ್ರಲ್ಲಿ ಡೌಟಿಲ್ಲ. ಆದ್ರೆ ಎಫ್ 1 ಅನ್ನೋ ಕಾರ್ ನಂಬರ್ ಪ್ಲೇಟ್ ಬೆಲೆ ಕೇಳಿದ್ರೆ ನೀವು ಅತ್ಯಾಶ್ಚರ್ಯ ಪಡ್ತೀರಾ. ಇಂಗ್ಲೆಂಡ್ ನಲ್ಲಿ ಎಫ್ 1 ಅನ್ನೋ ಕಾರ್ ನಂಬರ್ ಪ್ಲೇಟ್ ಬರೋಬ್ಬರಿ 132 ಕೋಟಿ ರೂಪಾಯಿಗೆ ಮಾರಾಟಕ್ಕಿದೆ.

ಭಾರತದಲ್ಲಿ 1 ನಂಬರ್ ಪ್ಲೇಟ್ ಗೆ 4 ಲಕ್ಷ ನೀಡಿದರೆ ಮೂಗಿನ ಮೇಲೆ ಬೆರಳಿಡುವವರಿದ್ದಾರೆ. ಆದರೆ ಇಂಗ್ಲೆಂಡ್ ನಲ್ಲಿ ಅಫ್ಜಲ್ ಖಾನ್ ಎಂಬ ಉದ್ಯಮಿ ಎಫ್ 1 ಕಾರ್ ನಂಬರ್ ಪ್ಲೇಟ್ ಗೆ ಬರೋಬ್ಬರಿ 132 ಕೋಟಿ ದರ ಹೇಳಿದ್ದಾರೆ. ಇದೇನಾದರೂ ಸೇಲ್ ಆದಲ್ಲಿ ಜಗತ್ತಿನ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಆಗೋದ್ರಲ್ಲಿ ಡೌಟಿಲ್ಲ.

ಇಲ್ಲಿಯವರೆಗೆ ದುಬೈನಲ್ಲಿ ಭಾರತೀಯ ಬಲ್ವಿಂದರ್ ಸಹಾನಿ ಎಂಬಾತ ಡಿ5 ಅನ್ನೋ ನಂಬರ್ ಪ್ಲೇಟ್ ಗೆ 67 ಕೋಟಿ ನೀಡಿದ್ದೇ ಅತಿ ದುಬಾರಿ ಮೊತ್ತವಾಗಿತ್ತು. ಅಲ್ಲದೇ ಅಬುದಾಬಿಯಲ್ಲಿ 1 ನಂಬರ್ ಪ್ಲೇಟ್ ಗೆ ವ್ಯಕ್ತಿಯೊಬ್ಬ 66 ಕೋಟಿ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...