alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ದುಬಾರಿ ಬೈಕ್ ನಲ್ಲಿ ಏನೆಲ್ಲಾ ವಿಶೇಷತೆಯಿದೆ ಗೊತ್ತಾ…?

ಸಾಮಾನ್ಯ ಜನತೆಗೆ ಓಡಾಡಲೊಂದು ಬೈಕ್ ಖರೀದಿಸುವುದೇ ದುಸ್ತರವಾಗಿರುವಾಗ ಅತಿ ಶ್ರೀಮಂತರು, ಅಪರೂಪಕ್ಕೊಮ್ಮೆ ಓಡಿಸುವ ಬೈಕ್ ಗಳ ಮೇಲೆಯೇ ಕೋಟಿಗಟ್ಟಲೆ ಹಣ ವ್ಯಯಿಸುತ್ತಾರೆ.

ಅಂತಹ ಅತಿ ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡೇ ಹಾರ್ಲೆ ಡೇವಿಡ್ಸನ್, ವಿಶ್ವದ ಅತ್ಯಂತ ದುಬಾರಿ ಬೆಲೆಯ ಬ್ಲೂ ಎಡಿಷನ್ ಬೈಕನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಬೈಕ್ ನಲ್ಲಿ ಅಳವಡಿಸಿರುವ ಸ್ಪೇರ್ ಪಾರ್ಟ್ಸ್ ಗಳ ಬೆಲೆ ಕೇಳಿದ್ರೇನೆ ತಲೆ ತಿರುಗುತ್ತೆ.

ಅಂದ ಹಾಗೇ ಈ ಬೈಕಿನ ಬೆಲೆ ಬರೋಬ್ಬರಿ 12.19 ಕೋಟಿ ರೂಪಾಯಿಗಳು. ಬಹು ಮುಖ್ಯವಾದ ಅಂಶವೆಂದರೆ ಈ ಬೆಲೆ ಎಕ್ಸ್ ಶೋ ರೂಂ ನದ್ದು. ಇದರಲ್ಲಿ ಇತರೆ ಖರ್ಚು, ವೆಚ್ಚಗಳು ಸೇರಿಲ್ಲ. ಸ್ವಿಸ್ ವಾಚ್ ಕಂಪನಿ ಕಾರ್ಲ್ ಎಫ್ ಬುಶೆರರ್ ಸಹಯೋಗದಲ್ಲಿ ಲಿಮಿಟೆಡ್ ಎಡಿಷನ್ ನ ಈ ಬೈಕ್ ತಯಾರಿಸಲಾಗಿದ್ದು, ವಜ್ರಖಚಿತ ಸ್ಪೀಡೋ ಮೀಟರ್ ಅಳವಡಿಸಲಾಗಿದೆ. ಈ ಬೈಕನ್ನು ಸಾಮಾನ್ಯರು ನೋಡಿ ತೃಪ್ತಿ ಪಡಬೇಕಾಗಿದೆಯಷ್ಟೇ. ಅಷ್ಟಕ್ಕೂ ಭಾರತದಲ್ಲಿ ವಿಶ್ವದ ಅತಿ ದುಬಾರಿ ಬೈಕನ್ನು ಯಾರು ಖರೀದಿಸಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...