alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಿಂದಲೇ ಕಛೇರಿ ಕೆಲಸ ಮಾಡಿದ ಟೆಕ್ಕಿಗಳು

home work

ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆದುಕೊಂಡು ಹಿಂಸೆಗೆ ತಿರುಗಿದ ಹಿನ್ನಲೆಯಲ್ಲಿ ಸಾಫ್ಟ್ ವೇರ್ ಕಂಪನಿಗಳು ಸೇರಿದಂತೆ ಹಲವು ಖಾಸಗಿ ಸಂಸ್ಥೆ ನೌಕರರಿಗೆ ಕಚೇರಿಗೆ ಬರದಂತೆ ಸೂಚಿಸಲಾಗಿತ್ತು.

ಕಚೇರಿಗೆ ಬಂದು ಹೋಗಲು ತೊಂದರೆಯಾಗಲಿರುವ ಹಿನ್ನಲೆಯಲ್ಲಿ ಮನೆಯಲ್ಲೇ ಕುಳಿತು ಅಂದಿನ ಕೆಲಸವನ್ನು ಅಂದೇ ಮುಗಿಸಿಕೊಡುವಂತೆ ತಿಳಿಸಿದ್ದವು. ಕೆಲವು ಕಂಪನಿಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆದರೆ, ಮತ್ತೆ ಕೆಲವು ಕಂಪನಿಗಳು ತಮ್ಮ ಸಂಸ್ಥೆಯ ನೌಕರರಿಗೆ ಮನೆಯಿಂದಲೇ ನಿಗದಿತ ಕೆಲಸ ಮಾಡುವಂತೆ ಸೂಚಿಸಿದ್ದವು. ಕಾವೇರಿ ಕಿಚ್ಚಿನಿಂದಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಕಳೆದ ಶುಕ್ರವಾರದಂದು ಕಾವೇರಿಗಾಗಿ ‘ಕರ್ನಾಟಕ ಬಂದ್’ ನಡೆದ ಸಂದರ್ಭದಲ್ಲಿ ಕೆಲವು ಐಟಿ ಕಂಪನಿಗಳು ರಜೆ ನೀಡಿರಲಿಲ್ಲ. ಆಗ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿ ಎಚ್ಚರಿಕೆ ನೀಡಿದ್ದವು.

ಇದೀಗ ಬೆಂಗಳೂರಿನಲ್ಲಿ ಸೋಮವಾರದಂದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಮನೆಯಿಂದಲೇ ಕೆಲಸ ಮಾಡುವಂತೆ ಅನೇಕ ಕಂಪನಿಗಳು ನೌಕರರಿಗೆ ಸೂಚಿಸಿದ್ದವು. ಮತ್ತೆ ಕೆಲವು ಕಂಪನಿಗಳು 1 ದಿನ ರಜೆ ನೀಡಿದ್ದವು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...