alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ನೀಡಿ ಸಿಮ್ ಪಡೆದಿದ್ದೀರಾ…? ಹಾಗಿದ್ರೆ ಓದಿ ಈ ಸುದ್ದಿ

ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಪಡೆಯುವಂತಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಸಿಮ್ ಪಡೆಯಲು ದಾಖಲೆಯಾಗಿ ಆಧಾರ್ ನೀಡಿದ್ದವರ ಮೊಬೈಲ್ ಸಂಪರ್ಕ ಸ್ಥಗಿತಗೊಳ್ಳುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆಧಾರ್ ಬದಲಿಗೆ ಮತ್ತೊಂದು ದಾಖಲೆ ನೀಡದಿದ್ದರೆ ದೇಶದ ಸುಮಾರು 50 ಕೋಟಿ ಮೊಬೈಲ್ ಗ್ರಾಹಕರ ಸಂಪರ್ಕ ಸ್ಥಗಿತಗೊಳ್ಳಲಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

ಇದೀಗ ಈ ಕುರಿತು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹಾಗೂ ದೂರಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದ್ದು, ಆಧಾರ್ ಮಾಹಿತಿ ನೀಡಿ ಸಿಮ್ ಪಡೆದವರ ಸಂಪರ್ಕ ಯಾವುದೇ ಕಾರಣಕ್ಕೂ ಕಡಿತವಾಗುವುದಿಲ್ಲ ಎಂದು ತಿಳಿಸಿದೆ. ಈ ಗ್ರಾಹಕರು ಬಯಸಿದರೆ ಆಧಾರ್ ಬದಲಿಗೆ ಮತ್ತೊಂದು ದಾಖಲೆಯನ್ನು ನೀಡಬಹುದಾಗಿದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...