alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಅಂಬಾನಿ ಮನೆಯ ವಿಶೇಷತೆ ಕೇಳಿದ್ರೆ ಬೆರಗಾಗ್ತಿರಿ

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಭಾರತವೊಂದೇ ಅಲ್ಲ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ ಮತ್ತವರ ಕುಟುಂಬದ ಲೈಫ್ ಸ್ಟೈಲ್ ಕುರಿತು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮುಕೇಶ್ ಅಂಬಾನಿಯವರ ಮುಂಬೈನ ‘ಅಂಟಿಲ್ಲಾ’ ನಿವಾಸದ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ದಕ್ಷಿಣ ಮುಂಬೈನ ಪ್ರತಿಷ್ಟಿತ ಆಲ್ಟ್ ಮೌಂಟ್ ರಸ್ತೆಯಲ್ಲಿರುವ ‘ಅಂಟಿಲ್ಲಾ’, ಬಕ್ಕಿಂಗ್ ಹ್ಯಾಂ ಪ್ಯಾಲೇಸ್ ನಂತರದ ವಿಶ್ವದ ಎರಡನೇ ದುಬಾರಿ ನಿವಾಸ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 4,00,000 ಚದರಡಿ ವಿಸ್ತೀರ್ಣದಲ್ಲಿರುವ ಈ ನಿವಾಸದ ಮೌಲ್ಯ 2 ಬಿಲಿಯನ್ ಡಾಲರ್ ಗಳೆಂದು ಅಂದಾಜಿಸಲಾಗಿದೆ.

‘ಅಂಟಿಲ್ಲಾ’ ನಿವಾಸವಿರುವ ಆಲ್ಟ್ ಮೌಂಟ್ ರಸ್ತೆಯಲ್ಲಿ ನಿವೇಶನದ ಬೆಲೆಯೇ ಚದರಡಿಗೆ 80 ಸಾವಿರದಿಂದ 85 ಸಾವಿರಗಳೆಂದು ಹೇಳಲಾಗಿದೆ. ‘ಅಂಟಿಲ್ಲಾ’ ದಲ್ಲಿ ಒಟ್ಟು 60 ಫ್ಲೋರ್ ಗಳಿವೆ ಎನ್ನಲಾಗಿದ್ದು, ಈ ಪೈಕಿ ಆರು ಫ್ಲೋರ್ ಗಳನ್ನು ಕಾರುಗಳ ನಿಲುಗಡೆಗೆ ನಿಗದಿಪಡಿಸಲಾಗಿದೆ. ಏಳನೇ ಫ್ಲೋರ್ ನಲ್ಲಿ ಕಾರ್ ಸರ್ವೀಸ್ ಸ್ಟೇಷನ್ ಇದೆ. ಮುಂಬೈನ ಟ್ರಾಫಿಕ್ ನಲ್ಲಿ ಓಡಾಡುವುದು ಕಷ್ಟವೆಂಬ ಕಾರಣಕ್ಕೆ ಟಾಪ್ ಫ್ಲೋರ್ ನಲ್ಲಿ ಮೂರು ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿದೆ.

ನಾಲ್ಕು ಫ್ಲೋರ್ ಗಳಲ್ಲಿ ಓಪನ್ ಗಾರ್ಡನ್ ಜೊತೆಗೆ ಮುಂಬೈನ ಸೆಕೆ ವಾತಾವರಣದಲ್ಲೂ ಶಿಮ್ಲಾವನ್ನು ನೆನಪಿಸುವಂತೆ ಒಂದು ಫ್ಲೋರ್ ನಲ್ಲಿ ಸ್ನೋ ರೂಮ್ ರೂಪಿಸಲಾಗಿದೆ. ಪ್ರತ್ಯೇಕ ಸಿನಿಮಾ ಥಿಯೇಟರ್, ಐಸ್ ಕ್ರೀಂ ಪಾರ್ಲರ್ ಸೇರಿದಂತೆ ಸಕಲ ಸೌಲಭ್ಯವೂ ಮನೆಯಲ್ಲಿದ್ದು, ‘ಅಂಟಿಲ್ಲಾ’ ದಲ್ಲಿ ಒಟ್ಟು 600 ಕ್ಕೂ ಅಧಿಕ ಮಂದಿ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...