alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನಿ ಮಹಿಳೆಯ ಕ್ಷೀರ ಕ್ರಾಂತಿ

ರಾಜಸ್ಥಾನದ ಮಹಿಳೆಯೊಬ್ಬರು ಡೈರಿ ಸೊಸೈಟಿ ಸ್ಥಾಪಿಸಿ ಕ್ಷೀರ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಧಪ್ಡಾ ಎಂಬ ಹಳ್ಳಿಯ ಮಹಿಳೆ ಹೇಮಲತಾ ರಾವತ್ ಎಂಬಾಕೆಯೇ ಈ ಸಾಧನೆ ಮಾಡಿದಾಕೆ.

ಈಕೆ ಕೇವಲ ಒಂದು ಆಕಳನ್ನು ಸಾಕುವ ಮೂಲಕ ಈ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ್ದರು. ನಂತರ ಆಕೆಯ ಸ್ನೇಹಿತೆಗೂ ಹೀಗೆಯೇ ಆಕಳನ್ನು ಕೊಂಡು ಡೈರಿ ಉತ್ಪನ್ನ ಮಾರಾಟ ಮಾಡುವಂತೆ ಹೇಳಿದರು. ಹೀಗೆ 11 ಮಂದಿ ಮಹಿಳೆಯರು ಸೇರಿ ಆಕಳುಗಳನ್ನು ಕೊಂಡು ಹಾಲನ್ನು ಮಾರಾಟ ಮಾಡುತ್ತಿದ್ದಾರೆ.

ಪ್ರತಿ ತಿಂಗಳೂ 2 ರಿಂದ ಎರಡೂವರೆ ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಾರೆ. ಈಗ ಈ ಯಶಸ್ವಿ ಮಹಿಳೆಯರ ಗುಂಪು ಧಪ್ಡಾ ಮಸಾಲಾ ಉದ್ಯೋಗ ಸಮಿತಿಯನ್ನೂ ರಚಿಸಿದ್ದು, ಇದರಿಂದಲೂ ತಿಂಗಳಿಗೆ 30 ರಿಂದ 35 ಸಾವಿರ ರೂ. ಗಳಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...