alex Certify
ಕನ್ನಡ ದುನಿಯಾ       Mobile App
       

Kannada Duniya

2016 ರಲ್ಲಿ ಮಹಿಳೆಯರದ್ದೇ ಮೇಲುಗೈ

53800176

ಸಾಧನೆ ವಿಚಾರದಲ್ಲಿ ಈ ಬಾರಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ದೇಶದ ಪತಾಕೆ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. ಪರಿಶ್ರಮ ಹಾಗೂ ಛಲದಿಂದ ಹೋರಾಡಿ 2016 ರಲ್ಲಿ ಇತಿಹಾಸ ಪುಟ ಸೇರಿದ ಮಹಿಳೆಯರ ವಿವರ ಇಲ್ಲಿದೆ.

ಪಿವಿ ಸಿಂಧು : ರಿಯೋ ಒಲಂಪಿಕ್ಸ್ ನಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಮ್ಮೆಯ ಭಾರತೀಯ ಮಹಿಳೆ ಪಿವಿ ಸಿಂಧು. ರಿಯೋ ಒಲಂಪಿಕ್ಸ್ ನ ವನಿತೆಯರ ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.

ಸಾಕ್ಷಿ ಮಲ್ಲಿಕ್ : ಸಾಕ್ಷಿ ಮಲ್ಲಿಕ್ ಕೂಡ ರಿಯೋ ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಮಹಿಳೆ. ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ.

ದೀಪಾ ಕರ್ಮಕರ್ : ಪದಕ ಕೈತಪ್ಪಿದ್ರೂ ಭಾರತೀಯರ ಮನ ಗೆದ್ದವರು ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಕರ್. ರಿಯೋ ಒಲಂಪಿಕ್ಸ್ ನಲ್ಲಿ ಪದಕ ಕೆಲವೇ ಅಂತರದಲ್ಲಿ ಕೈತಪ್ಪಿತ್ತು. ಆದ್ರೆ ಫೈನಲ್ ಪ್ರವೇಶಿಸಿದ ಮೊದಲ ಜಿಮ್ನಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಿಯಾಂಕ ಚೋಪ್ರಾ : ಜೈ ಗಂಗಾಜಲ್ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪ್ರಿಯಾಂಕ ಹಾಲಿವುಡ್ ನಲ್ಲಿ ಸುದ್ದಿ ಮಾಡಿದ್ದಾರೆ. ಜೊತೆಗೆ ವಿಶ್ವದ ಪ್ರಸಿದ್ಧ ನಿಯತಕಾಲಿಕೆಗಳ ಮುಖಪುಟದಲ್ಲಿ ಮಿಂಚಿದ ಪ್ರಿಯಾಂಕಾಗೆ ಈ ವರ್ಷ ಅತ್ಯುತ್ತಮವಾಗಿತ್ತೆಂದ್ರೆ ತಪ್ಪಾಗಲಾರದು.

ಹಿಲರಿ ಕ್ಲಿಂಟನ್ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸುದ್ದಿಯಾದವರು ಹಿಲರಿ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಫೈಟ್ ನೀಡಿದ ಹಿಲರಿ ಅನೇಕರ ಮನಸ್ಸು ಗೆದ್ದಿದ್ದಾರೆ.

ಮಿಶೆಲ್ ಒಬಾಮಾ : ಮಿಶೆಲ್ ಒಬಾಮಾ ವ್ಯಕ್ತಿತ್ವ ವಿಶ್ವದ ಜನರನ್ನು ಆಕರ್ಷಿಸಿದೆ. ಅಮೆರಿಕಾ ಮಂದಿ ಈಗ್ಲಿಂದಲೇ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಏಂಜೆಲಾ ಮರ್ಕೆಲ್ : ಜರ್ಮನಿಯ ಮೊದಲ ಮಹಿಳಾ ಚಾನ್ಸಲರ್ ಏಂಜೆಲಾ ಮರ್ಕೆಲ್. ಫೋರ್ಬ್ಸ್ 2016 ರ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...