alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಪುರಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಹೇಳಿದೆ.

ಪುರುಷರಿಗೆ ಸಮನಾಗಿ ಮಹಿಳೆಯರು ಕೂಡ ಕೆಲಸ ಮಾಡುತ್ತಾರೆ. ಆದರೆ, ವೇತನದ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಲ್ಲಿ ಮಹಿಳೆಯರಿಗೆ ಸರಾಸರಿ ಶೇ. 16.1 ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ.

ಪುರುಷರಿಗೆ ಹೋಲಿಸಿದಾಗ ಮಹಿಳೆಯರು ಸರಾಸರಿ ಶೇ. 16.1 ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಕಾರ್ನ್ ಫೆರ್ರಿ ವರದಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಒಂದೇ ಬಗೆಯ ಕೆಲಸವನ್ನು ನಿರ್ವಹಿಸುವ ಸ್ಥಳದಲ್ಲಿ ಶೇ. 4 ರಷ್ಟು ವೇತನದ ಅಂತರ ಇದೆ. ಒಂದೇ ಸಂಸ್ಥೆ, ಒಂದೇ ರೀತಿಯ ಹುದ್ದೆಯಲ್ಲಿರುವ ಸ್ತ್ರೀ, ಪುರುಷರ ವೇತನ ಅಂತರ ಶೇ. 0.4 ರಷ್ಟಿದೆ. ಗರಿಷ್ಠ ವೇತನ ಪಡೆಯುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆ ಇದೆ.

ಪುರುಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ವೇತನ ನೀಡಲಾಗುತ್ತದೆ ಎಂದು 53 ದೇಶಗಳ 14,000 ಸಂಸ್ಥೆಗಳ 1.23 ಕೋಟಿ ಸಿಬ್ಬಂದಿಯ ವೇತನದ ಮಾಹಿತಿಗಳನ್ನು ವಿಶ್ಲೇಷಿಸಿ ಕಾರ್ನ್ ಫೆರ್ರಿ ಸಂಸ್ಥೆಯಿಂದ ವರದಿಯನ್ನು ರಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...