alex Certify
ಕನ್ನಡ ದುನಿಯಾ       Mobile App
       

Kannada Duniya

ನೇರ ಮಾರಾಟ ಉದ್ಯಮದಲ್ಲಿ ಮಹಿಳೆಯರ ಪಾಲೇ ಹೆಚ್ಚು

ಭಾರತದಲ್ಲಿ ನೇರ ಮಾರಾಟ ಉದ್ಯಮ 9850 ಕೋಟಿ ರೂಪಾಯಿ. ಅದ್ರಲ್ಲಿ ಶೇಕಡಾ 53 ರಷ್ಟು ಮಹಿಳೆಯರ ಪಾಲಿದೆಯಂತೆ. ವಿಶ್ವ ಫೆಡರೇಶನ್ ಆಫ್ ಡೈರೆಕ್ಟ್ ಸೆಲ್ಲಿಂಗ್ ಅಸೋಸಿಯೇಷನ್ ವರದಿಯಲ್ಲಿ ಇದು ಬಹಿರಂಗವಾಗಿದೆ. 2017ರಲ್ಲಿ ನೇರ ಮಾರಾಟ ಉದ್ಯಮ 51 ಲಕ್ಷ ಜನರಿಗೆ ಉದ್ಯೋಗ ನೀಡಿದೆಯಂತೆ. ಅದ್ರಲ್ಲಿ 27 ಲಕ್ಷ ಮಹಿಳೆಯರು ಎಂಬುದು ವಿಶೇಷ.

ವರದಿ ಪ್ರಕಾರ ಚೀನಾ ಹಾಗೂ ಭಾರತದಲ್ಲಿ ನೇರ ಮಾರಾಟ ಮಾಡುವವರ ಸಂಖ್ಯೆ ಹೆಚ್ಚು ಕಮ್ಮಿ ಒಂದೇ ಇದೆ. ಆದ್ರೆ ಚೀನಾದಲ್ಲಿ ಭಾರತಕ್ಕಿಂತ ಹೆಚ್ಚಿನ ಮಟ್ಟದಲ್ಲಿ ವ್ಯವಹಾರ ನಡೆಯುತ್ತದೆ. 2017 ರಲ್ಲಿ ಭಾರತದಲ್ಲಿ ಶೇಕಡಾ 51 ಲಕ್ಷ ಹಾಗೂ ಚೀನಾದಲ್ಲಿ 53 ಲಕ್ಷ ಜನರು ನೇರ ಮಾರಾಟ ವ್ಯವಹಾರ ನಡೆಸಿದ್ದಾರಂತೆ.

ಚೀನಾದಲ್ಲಿ 2.4 ಲಕ್ಷ ಕೋಟಿ ವಹಿವಾಟು ನಡೆದ್ರೆ ಭಾರತದಲ್ಲಿ 10 ಸಾವಿರ ಕೋಟಿ ವ್ಯವಹಾರ ನಡೆಯುತ್ತದೆಯಂತೆ. ಭಾರತ ನೇರ ಮಾರಾಟ ವ್ಯವಹಾರಕ್ಕೆ ಸೂಕ್ತ ಮಾರುಕಟ್ಟೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನಿಲ್ಲವಾದ್ರೂ ನೇರ ಮಾರಾಟ ಉದ್ಯಮ, ಉದ್ಯಮಶೀಲತೆಗೆ ಅವಕಾಶ ಮಾಡಿಕೊಡ್ತಿದೆ. ಕೌಶಲ್ಯ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಉತ್ತಮ ವೇದಿಕೆಯಾಗಿದೆ.

ವರದಿ ಪ್ರಕಾರ, ವಿಶ್ವದ 10 ಅತಿ ದೊಡ್ಡ ನೇರ ಮಾರಾಟ ಮಾರುಕಟ್ಟೆಗಳಲ್ಲಿ ಏಷ್ಯಾದ ಐದು ದೇಶಗಳು ಸ್ಥಾನ ಪಡೆದಿವೆ. ಅಮೆರಿಕಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ರೆ ಚೀನಾ ಎರಡನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...