alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಶೇ.80 ರಷ್ಟು ಮನೆಗಳಲ್ಲಿ LPG ಬಳಕೆ

ಭಾರತದ ಎಲ್ಲಾ ಮನೆಗಳಿಗೂ ಅಡುಗೆ ಅನಿಲ ಪೂರೈಸಬೇಕೆಂಬ ಕೇಂದ್ರ ಸರ್ಕಾರದ ಉದ್ದೇಶ ಬಹುತೇಕ ಈಡೇರಿದೆ. 3 ವರ್ಷಗಳ ಹಿಂದೆ ಶೇ.56ರಷ್ಟು ಕುಟುಂಬಗಳು ಮಾತ್ರ ಅಡುಗೆ ಅನಿಲ ಬಳಸುತ್ತಿದ್ವು. ಆದ್ರೀಗ ದೇಶದ ಶೇ.80 ರಷ್ಟು ಮನೆಗಳಲ್ಲಿ ಎಲ್ ಪಿ ಜಿ ಇದೆ.

ಆಯಾ ರಾಜ್ಯದ ತೈಲ ಕಂಪನಿಗಳು ಹೆಚ್ಹೆಚ್ಚು ಗ್ರಾಹಕರನ್ನು ಸಂಪಾದಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 7 ಕೋಟಿ ಹೊಸ ಗ್ರಾಹಕರನ್ನು ಪಡೆದಿವೆ. ಚಂದಾದಾರರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಅವರಿಗೆ ಎಲ್ ಪಿ ಜಿ ಪೂರೈಸುವುದು ಕೂಡ ಕಂಪನಿಗಳಿಗೆ ಸವಾಲಾಗಿದೆ.

2018-19ರ ಅಂತ್ಯದ ವೇಳೆಗೆ ಒಟ್ಟು 10 ಕೋಟಿ ಗ್ರಾಹಕರನ್ನು ಸಂಪಾದಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಟಾರ್ಗೆಟ್ ನೀಡಿದೆ. 2017ರ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಸುಮಾರು 2.2 ಕೋಟಿ ಹೊಸ ಗ್ರಾಹಕರು ದೊರೆತಿರುವುದು ವಿಶೇಷ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶದಲ್ಲಿ ಹೊಸ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...