alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾದಲ್ಲಿ ಆರಂಭವಾಗಿದೆ ‘ತೇಲುವ ಮಾರುಕಟ್ಟೆ’…!

ಥೈಲ್ಯಾಂಡ್, ವೆನ್ನಿಸ್ ಹಾಗೂ ಭಾರತದ ಕಾಶ್ಮೀರದಲ್ಲಿ ತೇಲುವ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸಿಗರ ಮನ ಸೆಳೆದಿವೆ. ಇದೀಗ ಕೋಲ್ಕತ್ತಾದ ಪಟೋಲಿಯಲ್ಲಿ ತೇಲುವ ಮಾರುಕಟ್ಟೆ ಆರಂಭಗೊಂಡಿದ್ದು, ಇದನ್ನು ಹೊಂದಿರುವ ಮೊದಲ ಮೆಟ್ರೋ ನಗರವೆಂಬ ಖ್ಯಾತಿಗೆ ಕೋಲ್ಕತ್ತಾ ಒಳಗಾಗಿದೆ.

114 ಬೋಟ್ ಗಳಲ್ಲಿ 228 ಮಂದಿ ವ್ಯಾಪಾರಿಗಳು ತಮ್ಮ ವಹಿವಾಟು ಆರಂಭಿಸಿದ್ದು, ಬುಧವಾರದಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಉದ್ಘಾಟಿಸಿದ್ದಾರೆ.

ಕೋಲ್ಕತ್ತಾ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಈ ತೇಲುವ ಮಾರುಕಟ್ಟೆಯನ್ನು ನಿರ್ಮಿಸಿದ್ದು, 500 ಮೀ. ಉದ್ದ ಹಾಗೂ 60 ಮೀ. ಅಗಲಕ್ಕೆ ವ್ಯಾಪಿಸಿದೆ. ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಇದನ್ನು ನೋಡಲು ಮತ್ತು ಇಲ್ಲಿ ಸಾಮಾಗ್ರಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...