alex Certify
ಕನ್ನಡ ದುನಿಯಾ       Mobile App
       

Kannada Duniya

600 ನೌಕರರನ್ನು ಹೊರ ಹಾಕಿದ ವಿಪ್ರೋ

wipro_760_1492706687_749x421

ದೇಶದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ಕಂಪನಿ ವಿಪ್ರೋ, ನೌಕರರ ಕಾರ್ಯಕ್ಷಮತೆಯ ವಾರ್ಷಿಕ ಪರಿಶೀಲನೆ ನಂತ್ರ ನೂರಾರು ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.

ವಿಪ್ರೋ ಸುಮಾರು 600 ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಕೆಲ ಮೂಲಗಳು ಈ ಸಂಖ್ಯೆಯನ್ನು 2 ಸಾವಿರ ಎನ್ನುತ್ತಿವೆ. ಡಿಸೆಂಬರ್ 2016 ರಲ್ಲಿ ಕಂಪನಿ ನೌಕರರ ಸಂಖ್ಯೆ 1.76 ಲಕ್ಷವಿತ್ತು. ಪ್ರತಿ ವರ್ಷವೂ ಕಂಪನಿ, ನೌಕರರ ಕಾರ್ಯಕ್ಷಮತೆಯ ಪರೀಕ್ಷೆ ಮಾಡುತ್ತದೆ. ಕಂಪನಿಯ ಕಾರ್ಯವಿಧಾನ ಹಾಗೂ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೌಕರರ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಕಂಪನಿ ಮೂಲಗಳು ಹೇಳಿವೆ.

ಕಂಪನಿ ಪೂರ್ಣ ವರ್ಷದ ವರದಿಯನ್ನು ಏಪ್ರಿಲ್ 25ರಂದು ಎಲ್ಲರ ಮುಂದಿಡಲಿದೆ. ಅಮೆರಿಕಾ, ಸಿಂಗಾಪುರ, ಆಸ್ಟ್ರೇಲಿಯಾ ವೀಸಾ ಬದಲಾವಣೆಯಿಂದ ಭಾರತದ ಸಾಫ್ಟ್ ವೇರ್ ಕಂಪನಿಗಳಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಈ ವಿಚಾರವನ್ನೂ ವಿಪ್ರೋ ಪರಿಗಣಿಸಿದೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...