alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಬಿಯರ್, ವಿಸ್ಕಿ, ವೈನ್ ಎಲ್ಲವೂ ದುಬಾರಿ..?

whisky

ಜುಲೈ 1ರಿಂದ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಬಿಯರ್, ವಿಸ್ಕಿ ಹೀಗೆ ಅಲ್ಕೋಹಾಲ್ ಪಾನೀಯಗಳೆಲ್ಲ ದುಬಾರಿಯಾಗಲಿವೆ, ಇದು ಕೇಂದ್ರದ ಸರಕು ಮತ್ತು ಸೇವಾ ತೆರಿಗೆಯ ಎಫೆಕ್ಟ್.

ಮದ್ಯವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದ್ರೆ ಉಳಿದ ವಸ್ತುಗಳ ಬೆಲೆ ಏರಿಕೆಯಾಗುವುದರಿಂದ ಮದ್ಯವೂ ದುಬಾರಿಯಾಗಲಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಸ್ಕಿ, ಬಿಯರ್, ಜಿನ್, ವೋಡ್ಕಾ, ರಮ್, ವೈನ್ ಯಾವುದೇ ಆಗಿದ್ರೂ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ ಜೇಬಿಗೂ ಭಾರವಾಗಲಿದೆ. ಜಿಎಸ್ಟಿ ಜಾರಿ ಬಳಿಕ ಇನ್ಪುಟ್ ವೆಚ್ಚದಲ್ಲಿ ಶೇ.12-15ರಷ್ಟು ಏರಿಕೆಯಾಗಲಿದೆ. ಲಾಭ ಗಿಟ್ಟಿಸಿಕೊಳ್ಳಲು ಮದ್ಯ ಮಾರಾಟಗಾರರು ಅನಿವಾರ್ಯವಾಗಿ ಗ್ರಾಹಕರ ಮೇಲೆ ಭಾರ ಹೇರಲಿದ್ದಾರೆ.

ಈ ಹಿಂದೆ ಮದ್ಯದ ಗಾಜಿನ ಬಾಟಲಿಗಳ ಮೇಲೆ ಶೇ.15-16ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು, ಇನ್ಮೇಲೆ ಅದು ಶೇ.18ಕ್ಕೆ ಹೆಚ್ಚಳವಾಗಲಿದೆ. ಮದ್ಯ ತಯಾರಿಕೆಗೆ ಬೇಕಾದ ಕಾಕಂಬಿ ಕೂಡ ಶೇ.28 ರಷ್ಟು ತೆರಿಗೆ ಪಾವತಿಸಬೇಕಾದ ವಸ್ತುಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಮದ್ಯವನ್ನು ಕೂಡ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಅಲ್ಕೋಹಾಲ್ ಇಂಡಸ್ಟ್ರಿ ಸಾಕಷ್ಟು ಕಸರತ್ತು ನಡೆಸಿತ್ತು. ಆದ್ರೆ ಕೇಂದ್ರ ಅದನ್ನು ಕೈಬಿಟ್ಟಿದೆ. ಅದೇನೇ ಆದ್ರೂ ಮದ್ಯಪ್ರಿಯರು ಜುಲೈ 1ರ ನಂತರ ಜೇಬು ತುಂಬಾ ಹಣ ಇಟ್ಟುಕೊಂಡಿರಬೇಕಾದ ಸ್ಥಿತಿ ಬರಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...