alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಮನಸ್ಸು ಬದಲಾಗುವುದರ ಹಿಂದಿದೆ ಈ ದೊಡ್ಡ ಕಾರಣ

ಇದ್ದಕ್ಕಿದ್ದಂತೆ ಮದ್ಯದ ದೊರೆ ವಿಜಯ್ ಮಲ್ಯ ಮನಸ್ಸು ಬದಲಾಗಿದೆ. ಎರಡು ವರ್ಷಗಳ ಕಾಲ ಭಾರತೀಯರ ಮುಂದೆ ತಲೆ ಮರೆಸಿಕೊಂಡು ಓಡಾಡ್ತಿದ್ದ ಮಲ್ಯ ಏಕಾಏಕಿ ಟ್ವೀಟರ್ ಮೂಲಕ ಸುದ್ದಿಗೆ ಬಂದಿದ್ದಾರೆ. ಭಾರತಕ್ಕೆ ವಾಪಸ್ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬ್ಯಾಂಕ್ ಗಳಲ್ಲಿ ಮಾಡಿದ್ದ ಸಾಲ ತೀರಿಸುವುದಾಗಿ ಹೇಳ್ತಿದ್ದಾರೆ.

ಅರೇ, ಸಾಲ ಮಾಡಿ ಓಡಿಹೋದವನಿಗೆ ಈಗೇನಾಯ್ತು ಎನ್ನುವ ಪ್ರಶ್ನೆ ಸಾಮಾನ್ಯರನ್ನು ಕಾಡದೆ ಇರದು. ಇಷ್ಟು ದಿನ ಲಂಡನ್ ನಲ್ಲಿದ್ದ ಮಲ್ಯ ಭಾರತಕ್ಕೆ ವಾಪಸ್ ಬರಲು ಆಸಕ್ತಿ ತೋರುತ್ತಿರುವುದಕ್ಕೆ ದೊಡ್ಡ ಕಾರಣವೊಂದಿದೆ. ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನು ಮಲ್ಯ ತಲೆನೋವಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಮಲ್ಯ ಭಾರತಕ್ಕೆ ವಾಪಸ್ ಆಗಲು ನಿರ್ಧರಿಸಿದ್ದಾರೆ.

ದೊಡ್ಡ ಬ್ಯಾಂಕ್ ಗಳಲ್ಲಾಗುವ ಮೋಸವನ್ನು ತಪ್ಪಿಸಲು ಹೊಸ ಕಾನೂನು ಜಾರಿಗೆ ಬಂದಿದೆ. ಇದ್ರ ಅಡಿ ಜಾರಿ ನಿರ್ದೇಶನಾಲಯ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿ 12,500 ಕೋಟಿ ಮಲ್ಯ ಸಂಪತ್ತನ್ನು ಜಪ್ತಿ ಮಾಡಲು ಅವಕಾಶ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸಂಬಂಧ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಿದೆ. ಹೊಸ ಕಾನೂನಿನ ಪ್ರಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸಂಪತ್ತನ್ನು ಜಪ್ತಿ ಮಾಡುವ ಅವಕಾಶ ನೀಡಲಾಗಿದೆ.

ಜಾರಿ ನಿರ್ದೇಶನಾಲಯದ ಅರ್ಜಿಗೆ ನ್ಯಾಯಾಲಯ ಅಸ್ತು ಎಂದ್ರೆ ಮಲ್ಯರ ಎಲ್ಲ ಸಂಪತ್ತು  ಜಪ್ತಿಯಾಗಲಿದೆ. ಇದ್ರಿಂದ ವಿಚಲಿತರಾಗಿರುವ ಮಲ್ಯ ಭಾರತಕ್ಕೆ ವಾಪಸ್ ಆಗುವ ಮನಸ್ಸು ಮಾಡಿದ್ದಾರೆ. ಬ್ಯಾಂಕ್ ನಲ್ಲಿ ಮಾಡಿದ್ದ ಸಾಲ ತೀರಿಸುವುದಾಗಿ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...