alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಹುದ್ದೆ ತೊರೆಯಲಿದ್ದಾರಾ ಮುಕೇಶ್ ಅಂಬಾನಿ…?

ದೇಶದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿ ಸೇರಿದಂತೆ ಭಾರತೀಯ ಉದ್ಯಮ ಲೋಕದ ಕೆಲ ಖ್ಯಾತನಾಮರು ತಾವು ಹೊಂದಿರುವ ಒಂದು ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಾರುಕಟ್ಟೆ ನಿಯಂತ್ರಕ ಸೆಬಿ ನಿಯಮಾವಳಿಗಳ ಪ್ರಕಾರ ಕಂಪನಿಗಳು, ತಮ್ಮ ಮಂಡಳಿಗೆ ಕಾರ್ಯಕಾರಿಯೇತರ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಬೇಕಿದ್ದು, ಹೀಗಾಗಿ ಸದ್ಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ, ಭಾರ್ತಿ ಏರ್ಟೆಲ್ ನ ಸುನೀಲ್ ಮಿತ್ತಲ್ ಸೇರಿದಂತೆ ಹಲವರು ತಾವು ಹೊಂದಿರುವ ಒಂದು ಹುದ್ದೆಯನ್ನು ತೊರೆಯಬೇಕಾಗುತ್ತದೆ.

2020 ರ ಏಪ್ರಿಲ್ 1 ರೊಳಗೆ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು, ತಾವು ತೊರೆಯಲಿರುವ ಸ್ಥಾನಕ್ಕೆ ಉದ್ಯಮ ಲೋಕದ ಈ ದಿಗ್ಗಜರು ಯಾರನ್ನು ನೇಮಕ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...