alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಾಯವಾಣಿ ಹೆಸರಲ್ಲಿ ತಪ್ಪು ನಂಬರ್ ಸೇವ್ ಆಗಿರುವುದಕ್ಕೆ ಹೊಣೆ ಯಾರು?

ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಗಳು, ನೆಟ್ವರ್ಕ್ ಸಂಸ್ಥೆಗಳ ವಿರುದ್ಧ ಆಧಾರ್ ಪ್ರಾಧಿಕಾರ ಹರಿಹಾಯ್ದಿದೆ. ತನ್ನ ಸಹಾಯವಾಣಿಯ ತಪ್ಪು ನಂಬರ್ ನ್ನ ಸ್ಮಾರ್ಟ್ಫೋನ್ ಮತ್ತು ಸಿಮ್ ಕಾರ್ಡ್ ಗಳಲ್ಲಿ ನೀಡುತ್ತಿರುವ ಬಗ್ಗೆ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ ವಾಗ್ದಾಳಿ ನಡೆಸಿದೆ.

ಗೂಗಲ್ ನಲ್ಲಿ, ಸ್ಮಾರ್ಟ್ಫೋನ್ ಗಳಲ್ಲಿ ಮತ್ತು ಸಿಮ್ ಕಾರ್ಡ್ ಗಳಲ್ಲಿ ಡೀಫಾಲ್ಟ್ ರೂಪದಲ್ಲಿ ಸೇವ್ ಆಗಿರುವ 1800-300-1974 ನಂಬರ್ ಬಳಸುವಂತೆ ಆಧಾರ್ ಪ್ರಾಧಿಕಾರ ಸೂಚನೆಯನ್ನೇ ನೀಡಿಲ್ಲ. ಹಾಗಿದ್ದರು ಈ ಸಂಖ್ಯೆಯನ್ನ ಸಹಾಯವಾಣಿಯ ನಂಬರ್ ಆಗಿ ನೀಡ್ತಿರೋದಕ್ಕೆ ಆಧಾರ್ ಪ್ರಾಧಿಕಾರ ಬೇಸರ ವ್ಯಕ್ತಪಡಿಸಿದೆ.

ತನ್ನ ಅಧಿಕೃತ ಸಹಾಯವಾಣಿಯ ಸಂಖ್ಯೆ 1947. ಇದರ ಹೊರತಾಗಿ ಬೇರೆ ಸಂಖ್ಯೆಯನ್ನ ಅಧಿಕೃತ ಆಧಾರ್ ಸಹಾಯವಾಣಿಯಾಗಿ ಬಳಸುವಂತೆ ನಾವು ಯಾರಿಗೂ ಸೂಚನೆ ನೀಡಿಲ್ಲ. ಹಾಗಿದ್ದರು ಅನಧಿಕೃತ ಸಂಖ್ಯೆಯನ್ನು ಸ್ಮಾರ್ಟ್ ಫೋನ್ ಮತ್ತು ನೆಟ್ ವರ್ಕ್ ಸಂಸ್ಥೆಗಳು ಬಳಸುವ ಮೂಲಕ ಪರೋಕ್ಷವಾಗಿ ಅದೇ ಸಂಖ್ಯೆಯನ್ನ ಆಧಾರ್ ಸಹಾಯವಾಣಿಯಾಗಿಸುವಂತೆ ಒತ್ತಡ ಹೇರುತ್ತಿವೆ. ಈ ವಿಚಾರದಲ್ಲಿ ಆಧಾರ್ ಪ್ರಾಧಿಕಾರ ಇಂತ ಒತ್ತಡಗಳಿಗೆ ಮಣಿಯೋದಿಲ್ಲ ಅಂತ ಕಟ್ಟುನಿಟ್ಟಾಗಿ ತಿಳಿಸಿದೆ.

ಸಾವಿರಾರು ಸ್ಮಾರ್ಟ್ ಫೋನ್ ಗಳಲ್ಲಿ ತಪ್ಪಾಗಿ ನಮೂದಾಗಿರುವ ಆಧಾರ್ ಸಹಾಯವಾಣಿಯ ವಿಚಾರ ಇತ್ತೀಚೆಗಷ್ಟೆ ಆಧಾರ್ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಆಧಾರ್ ಸುರಕ್ಷತೆಯ ಬಗ್ಗೆ, ಆಧಾರ್ ನಂಬರ್ ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಸಾಕಷ್ಟು ವಿವಾದಾತ್ಮಕ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಆಧಾರ್ ಪ್ರಾಧಿಕಾರ ಹೀಗೊಂದು ಸ್ಪಷ್ಟನೆಯನ್ನ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...