alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬೆಲೆ ಇಳಿಕೆಯಾದ್ರೂ ಗಮನಿಸ್ತಿಲ್ಲ ಗ್ರಾಹಕರು

petrole-eed

ನವದೆಹಲಿ: ದೈನಂದಿನ ಬೆಲೆ ಪರಿಷ್ಕರಣೆ ಜಾರಿಯಾಗಿ ಪೆಟ್ರೋಲ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಗ್ರಾಹಕರು ಗಮನವನ್ನೇ ಹರಿಸುತ್ತಿಲ್ಲ.

ಹಿಂದೆಲ್ಲಾ ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುವಾಗ ಗ್ರಾಹಕರು ಹೆಚ್ಚು ನಿಗಾ ವಹಿಸುತ್ತಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಬೆಲೆಯನ್ನು ಪರಿಷ್ಕರಿಸುತ್ತಿದ್ದವು.

ಆಗ ಬೆಲೆ ಏರಿಕೆ ಮತ್ತು ಇಳಿಕೆಯಾದಾಗ ಗ್ರಾಹಕರು ಹೆಚ್ಚು ಗಮನಿಸುತ್ತಿದ್ದರು. ಪೆಟ್ರೋಲ್ ಬೆಲೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಕೆಲವೊಮ್ಮೆ ಟ್ಯಾಂಕ್ ಫುಲ್ ಮಾಡಿಸಿಕೊಳ್ಳುವುದು, ಕ್ಯಾನ್ ಗಳಲ್ಲಿ ಸ್ಟಾಕ್ ಕೂಡ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು.

ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದಾಗ, ಕೆಲವು ಬಂಕ್ ಮಾಲೀಕರು ಸ್ಟಾಕ್ ಇದ್ರೂ ನೋ ಸ್ಟಾಕ್ ಬೋರ್ಡ್ ಹಾಕುತ್ತಿದ್ದರು. ಒಟ್ಟಿನಲ್ಲಿ ತೈಲ ಬೆಲೆ ಏರಿಳಿತ ಗಮನಾರ್ಹ ವಿಷಯವಾಗಿತ್ತು.

ಜೂನ್ 16 ರಿಂದ ದೈನಂದಿನ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಪೆಟ್ರೋಲ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ಗ್ರಾಹಕರ ಗಮನಕ್ಕೆ ಬಂದಿಲ್ಲ.

ನಿತ್ಯ ಬೆಲೆ ಏರಿಳಿತ ಕಾಣುತ್ತಿರುವುದರಿಂದ ಗ್ರಾಹಕರಿಗೆ ಬೆಲೆ ಬಗ್ಗೆ ಗಮನವಿಲ್ಲದಂತಾಗಿದೆ. ಜೂನ್ 16 ರಂದು ದೆಹಲಿಯಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಗೆ 65.48 ರೂ. ಇದ್ದು, ಜೂನ್ 30 ರಂದು 63.31 ರೂ ಆಗಿದೆ. ಅದೇ ರೀತಿ 54.49 ರೂ.ಇದ್ದ ಡೀಸೆಲ್ ಬೆಲೆ 53.46 ರೂ ಆಗಿದೆ.

ಜೂನ್ 16 ರಂದು ಮುಂಬೈನಲ್ಲಿ 76.70 ರೂ. ಇದ್ದ ಪೆಟ್ರೋಲ್ ಬೆಲೆ ಜೂನ್ 30 ರಂದು 74.56 ರೂ. ಆಗಿದೆ. ಚೆನ್ನೈನಲ್ಲಿ 68.02 ರೂ ನಿಂದ 65.74 ರೂ.ಗೆ ಇಳಿದಿದೆ. ಕೋಲ್ಕತ್ತಾದಲ್ಲಿ 68.03 ರೂ.ನಿಂದ 66.32 ರೂ.ಗೆ ಇಳಿದಿದೆ.

ಕಚ್ಚಾ ತೈಲದ ಬೆಲೆ, ರೂಪಾಯಿ ಮೌಲ್ಯ, ಸಾಗಣೆ ವೆಚ್ಚ ಇವು ಬೆಲೆ ಏರಿಳಿತಕ್ಕೆ ಕಾರಣವಾಗಿವೆ. ನಿತ್ಯ ಬೆಲೆ ಪರಿಷ್ಕರಣೆಯಾಗುತ್ತಿರುವುದರಿಂದ ತೈಲ ಬೆಲೆ ಕಡಿಮೆಯಾದರೂ ಹೆಚ್ಚಿನ ಗ್ರಾಹಕರು ಗಮನಿಸುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...