alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಇನ್ಮುಂದೆ ಪ್ರಸಾರವಾಗಲಿದೆ ಜಾಹೀರಾತು

ಸಾಮಾಜಿಕ ಜಾಲತಾಣ ಫೇಸ್ಬುಕ್ 2014 ರಲ್ಲಿ 22 ಬಿಲಿಯನ್ ಡಾಲರ್ ಗೆ ವಾಟ್ಸಾಪ್ ಖರೀದಿ ಮಾಡಿದೆ. ಈಗ ವಾಟ್ಸಾಪ್ ನಲ್ಲಿ ಹಣ ಸಂಪಾದಿಸಲು ಫೇಸ್ಬುಕ್ ಮುಂದಾಗಿದೆ. ಹಾಗಾಗಿ ಶೀಘ್ರವೇ ನಿಮ್ಮ ವಾಟ್ಸಾಪ್ ನಲ್ಲಿ ಜಾಹೀರಾತುಗಳು ಪ್ರಸಾರವಾಗಲಿವೆ. ಚಾಟಿಂಗ್ ವೇಳೆ ನಿಮಗೆ ಕಿರಿಕಿರಿಯಾಗುವ ಸಾಧ್ಯತೆಯಿದೆ.

ಈ ಹಿಂದೆ ಕೂಡ ಈ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ವಾಲ್ ಸ್ಟ್ರೀಟ್ ಮತ್ತೊಮ್ಮೆ ಈ ಬಗ್ಗೆ ವರದಿ ಪ್ರಸಾರ ಮಾಡಿದೆ. ವಾಟ್ಸಾಪ್ ನಲ್ಲಿ ಮುಂದಿನ ವರ್ಷದಿಂದ ಜಾಹೀರಾತು ಪ್ರಸಾರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಾಟ್ಸಾಪ್ ಹಾಗೂ ಫೇಸ್ಬುಕ್ ಈಗಾಗಲೇ ಜಾಹೀರಾತು ಪ್ರಸಾರಕ್ಕೆ ಅನುಮತಿ ನೀಡಿದೆ. ಸ್ಟೇಟಸ್ ನಲ್ಲಿ ಫೋಟೋ, ಸಣ್ಣ ವಿಡಿಯೋ ಮೂಲಕ ಜನರು ಜಾಹೀರಾತು ನೀಡಲು ಶುರು ಮಾಡಿದ್ದಾರೆ.

ಹಿಂದಿನ ವರ್ಷ ಫೆಬ್ರವರಿಯಲ್ಲಿ ವಾಟ್ಸಾಪ್ ಸ್ಟೇಟಸ್ ಫೀಚರ್ ಶುರು ಮಾಡಿದೆ. ಇದು ಸ್ನ್ಯಾಪ್ಶಾಟ್ ನ ಸ್ಟೋರಿ ಫೀಚರ್ ನಿಂದ ಪ್ರಭಾವಿತವಾಗಿದೆ. ಈಗ ವಾಟ್ಸಾಪ್ ಮತ್ತೊಂದು ಫೀಚರ್ ಶುರು ಮಾಡ್ತಿದೆ. ವಾಟ್ಸಾಪ್ ಬಳಕೆದಾರರು ನೇರವಾಗಿ ವಾಟ್ಸಾಪ್ ಮೂಲಕವೇ ಜಾಹೀರಾತು ಪ್ರಸಾರ ಮಾಡುವ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...