alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ…!

ವಾಟ್ಸಾಪ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಡ್ತಿದೆ. ಇನ್ನು ಕೆಲವೇ ದಿನದಲ್ಲಿ , ಆಡಿಯೋ ವಿಡಿಯೊ ಮೆಸೇಜ್ ಗಳು, ಪಿಕ್ಚರ್ ಸಂದೇಶಗಳು, ಟೆಕ್ಸ್ಟ್ ಗಳು ಸೇರಿದಂತೆ ವಾಟ್ಸಾಪ್ ನ ಎಲ್ಲಾ ಬಗೆಯ ಸಂದೇಶಗಳನ್ನೂ ಡಿಲೀಟ್ ಮಾಡ್ತಿದೆ. ಬಳಕೆದಾರರ ಎಲ್ಲಾ ಬಗೆಯ ದತ್ತಾಂಶಗಳನ್ನು ಅಳಿಸಿಹಾಕೋದಕ್ಕೆ ವಾಟ್ಸಾಪ್ ನಿರ್ಧರಿಸಿದೆ.

ವರ್ಷಾಂತ್ಯದ ಒಳಗೆ ತನ್ನ ಸೇವೆಗೆ ಹೊಸ ರೂಪ ನೀಡುವ ಉದ್ದೇಶದಿಂದ ವಾಟ್ಸಾಪ್ ಹೀಗೊಂದು ಕಾರ್ಯವನ್ನು ಜಾರಿಗೆ ತರುತ್ತಿದೆ. ಗೂಗಲ್ ಮತ್ತು ವಾಟ್ಸಾಪ್ ನಡುವಿನ ಸೇವೆಯ ಸ್ವರೂಪ ಬದಲಾಗ್ತಿರೋ ಹಿನ್ನಲೆಯಲ್ಲಿ ಹೀಗೊಂದು ಕ್ರಮ ಅನಿವಾರ್ಯವಾಗಿದೆ ಅಂತ ವಾಟ್ಸಾಪ್ ನಿರ್ವಹಣಾ ಮಂಡಳಿ ತಿಳಿಸಿದೆ.

ಹಾಗಾಗಿ ವಾಟ್ಸಾಪ್ ಬಳಕೆದಾರರು ತಮ್ಮ ಹಳೆಯ ವಾಟ್ಸಾಪ್ ಡೇಟಾವನ್ನ ಸಂಗ್ರಹಿಸಿಡೋಕ್ಕೆ ಗೂಗಲ್ ಡ್ರೈವ್ ಸಹಾಯಕ್ಕೆ ಬರಲಿದೆ. ಅದಕ್ಕಾಗಿ ಗೂಗಲ್ ತನ್ನ ಬಳಕೆದಾರರಿಗೆ 15 ಜಿಬಿ ಉಚಿತ ಡೇಟಾ ಸ್ಪೇಸ್ ನೀಡುತ್ತಿದೆ.

ತಮ್ಮ ಡೇಟಾವನ್ನ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳೋದಕ್ಕೆ ವಾಟ್ಸಾಪ್ ತನ್ನ ಗ್ರಾಹಕರಿಗೆ ನವೆಂಬರ್ 12 ರ ವರೆಗೆ ಕಾಲಾವಕಾಶ ನೀಡಿದೆ. ಆನಂತರದಲ್ಲಿ ಡೇಟಾ ಡಿಲೀಟ್ ಆದ್ರೆ ಅದಕ್ಕೆ ನಾವು ಹೊಣೆಯಲ್ಲ ಅಂತ ವಾಟ್ಸಾಪ್ ಸೂಚನೆ ನೀಡಿದೆ. ವಾಟ್ಸಾಪ್ ಮೆನ್ಯುವಿಗೆ ತೆರಳಿದ್ರೆ ಸೆಟ್ಟಿಂಗ್ಸ್ ನಲ್ಲಿ ಚಾಟ್ ಆಯ್ಕೆ ಮಾಡಿಕೊಂಡು ಚಾಟ್ ಬ್ಯಾಕ್ ಅಪ್ ಡೇಟಾವನ್ನ ಗೂಗಲ್ ಡ್ರೈವ್ ನಲ್ಲಿಟ್ಟುಕೊಳ್ಳಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...