alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗ್ರೂಪ್ ನಲ್ಲಿ ಟ್ಯಾಗ್ ಮಾಡೋದು ಹೀಗೆ….

ಸ್ಮಾರ್ಟ್ ಫೋನ್ ಇರುವವರೆಲ್ಲಾ ವಾಟ್ಸಾಪ್ ಬಳಸಿಯೇ ಬಳಸ್ತಾರೆ. ಈ ಮೆಸೇಜಿಂಗ್ ಆ್ಯಪ್ ಈಗ ಸ್ಮಾರ್ಟ್ ಫೋನ್ ಗಳ ಸಂಗಾತಿಯಾಗಿದೆ. ಎಷ್ಟೋ ಗ್ರೂಪ್ ಗಳನ್ನೂ ವಾಟ್ಸಾಪ್ ಮೂಲಕವೇ ಸಂಪರ್ಕಿಸಲು ಸಾಧ್ಯವಾಗಿದೆ. ಈ ಗ್ರೂಪ್ ನಲ್ಲಿ ನಿರ್ದಿಷ್ಟವಾಗಿ ಯಾರಾದ್ರೂ ಒಬ್ಬರಿಗೆ ಟ್ಯಾಗ್ ಅಥವಾ ಮೆನ್ಷನ್ ಕೂಡ ಮಾಡಬಹುದು.

ಈ ಹೊಸ ಫೀಚರ್ ಕೂಡ ವಾಟ್ಸಾಪ್ ನಲ್ಲಿ ಲಭ್ಯವಿದೆ. ವಾಟ್ಸಾಪ್ ನ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಈ ವಿವರಗಳನ್ನು ಪ್ರಕಟಿಸಲಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ, ಗ್ರೂಪ್ ಚಾಟ್ ಅನ್ನು ಮೊದಲು ಓಪನ್ ಮಾಡಿ. ನಂತರ @ ಅನ್ನೋ ಸಿಂಬಲ್ ಅನ್ನು ಟೈಪ್ ಮಾಡಿ.

ಆಗ ಗ್ರೂಪ್ ನ ಎಲ್ಲಾ ಸದಸ್ಯರ ಹೆಸರೂ ಕಾಣಿಸುತ್ತದೆ. ಯಾವ ಹೆಸರು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಮೆನ್ಷನ್ ಮಾಡಿದವರಿಗೆ ನೋಟಿಫಿಕೇಶನ್ ತಲುಪುತ್ತದೆ. ಕೇವಲ ಅಡ್ಮಿನ್ ಮಾತ್ರವಲ್ಲದೆ ಗ್ರೂಪ್ ನ ಇತರ ಸದಸ್ಯರಿಗೂ ಐಕಾನ್ ಮತ್ತು ಸಬ್ಜೆಕ್ಟ್ ಬದಲಾಯಿಸಲು ಅವಕಾಶವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...