alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು ವಾಟ್ಸಾಪ್ ಸ್ಟೇಟಸ್‍ ನಲ್ಲೂ ಜಾಹೀರಾತು…!

ಸ್ಮಾರ್ಟ್‍ಫೋನ್ ಬಳಕೆದಾರರಲ್ಲಿ ಜನಜನಿತವಾಗಿರುವ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ನಲ್ಲಿನ ಸ್ಟೇಟಸ್‍ನಲ್ಲೂ ಸದ್ಯದಲ್ಲೇ ಜಾಹೀರಾತುಗಳು ಬರಲಿವೆ. ಈ ಬಗ್ಗೆ ಈ ಹಿಂದೆಯೇ ಸುದ್ದಿ ಜಾರಿಯಲ್ಲಿತ್ತಾದರೂ ಅದು ಊಹಾಪೋಹವಾಗಿತ್ತು. ಆದರೆ ಈ ಬಗ್ಗೆ ಬುಧವಾರ ಕಂಪನಿಯ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್ ಅವರೇ ಹೇಳಿರುವುದರಿಂದ ಇದು ಅಧಿಕೃತವಾಗಿದೆ.

ಕಂಪನಿಗೆ ಲಾಭ ತರುವ ಹಾಗೂ ಬಳಕೆದಾರರಿಗೂ ವಾಟ್ಸಾಪ್ ಮೂಲಕ ವಹಿವಾಟು ವಿಸ್ತರಿಸಿಕೊಳ್ಳಲು ನೆರವಾಗುವ ಸಲುವಾಗಿ ಸ್ಟೇಟಸ್‍ ನಲ್ಲಿ ಜಾಹೀರಾತು ಪ್ರಕಟಿಸಲು ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ ಇದು ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಅವರು ಬಾಯಿಬಿಟ್ಟಿಲ್ಲ.

ಬಳಕೆದಾರರು ವಾಟ್ಸಾಪ್ ಸ್ಟೇಟಸ್‍ನಲ್ಲಿ ಹಾಕುವ ಟೆಕ್ಸ್ಟ್, ಫೋಟೋ, ವಿಡಿಯೊ ಇತ್ಯಾದಿಗಳು 24 ಗಂಟೆಗಳ ಕಾಲ ವೀಕ್ಷಣೆಗೆ ಲಭ್ಯ ಇರುತ್ತವೆ. ಈಗ ಆ ಸ್ಟೇಟಸ್‍ ಗಳಲ್ಲೇ ಜಾಹೀರಾತು ಪ್ರಕಟಿಸಲು ಸಂಸ್ಥೆ ಸಜ್ಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...