alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೆ ಬಂದ ಮೆಸೇಜ್ ಓದಿ ಹೇಳುತ್ತಂತೆ ವಾಟ್ಸಾಪ್ !

whatsapp-to-get-speak-feature-soonಇನ್ಮೇಲೆ ವಾಟ್ಸಾಪ್ ನಲ್ಲಿ ಮೆಸೇಜ್ ಬಂದಾಕ್ಷಣ ನೀವು ಅದನ್ನು ಓದಬೇಕೆಂದೇನಿಲ್ಲ, ತಾನಾಗಿಯೇ ಅದು ಸಂದೇಶವನ್ನು ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತದೆ.

ಬಳಕೆದಾರರಿಗೆ ಮೆಸೇಜ್ ಓದುವ ತಾಪತ್ರಯ ತಪ್ಪಿಸಲು ವಾಟ್ಸಾಪ್ ನಲ್ಲಿ ಹೊಸ ಫೀಚರ್ ಅಳವಡಿಸಲಾಗುತ್ತಿದೆ. ‘ಸ್ಪೀಕ್’ ಅನ್ನೋ ಹೆಸರಿನ ಈ ಸ್ಪೆಷಲ್ ಫೀಚರ್ ಅನ್ನು ವಾಟ್ಸಾಪ್ ರಹಸ್ಯವಾಗಿ ಪರೀಕ್ಷೆಗೆ ಒಳಪಡಿಸಿದೆಯಂತೆ.

ಸದ್ಯ ಈ ಆಪ್ಷನ್ ಕೇವಲ iOS ಡಿವೈಸ್ ಗಳಲ್ಲಿ ಮಾತ್ರ ಲಭ್ಯವಿದೆ. ಈ ಸ್ಪೀಕ್ ಫೀಚರ್ ಅನ್ನು ವಾಟ್ಸಾಪ್ ಅಳವಡಿಸಿದ್ದೇ ಆದಲ್ಲಿ ಬಳಕೆದಾರರಿಗೆ ಮೆಸೇಜ್ ಓದುವ ತಲೆನೋವಿಲ್ಲ, ಜೊತೆಗೆ ಲಾಕ್ ಓಪನ್ ಮಾಡಿ ನೋಡದೆ ಯಾವುದಾದ್ರೂ ಮಹತ್ವದ ಸಂದೇಶ್ ಮಿಸ್ ಆಗುವ ಚಾನ್ಸ್ ಕೂಡ ಇಲ್ಲ. ಮೆಸೇಜ್ ಬಂದಾಕ್ಷಣ ಅದು ದೊಡ್ಡ ಧ್ವನಿಯಲ್ಲಿ ಕೇಳಿಸಲಿದೆ.

ಸದಾ ಕೈಗಳನ್ನು ಬ್ಯುಸಿಯಾಗಿಡುವ ಚಾಲಕರು, ಬಾಣಸಿಗರು, ಕುಶಲಕರ್ಮಿಗಳಿಗೆ ಇದು ಸಹಾಯಕವಾಗಲಿದೆ. ಅಕಸ್ಮಾತ್ ನಿಮಗೆ ಯಾರಾದರೂ ಫೋಟೋ ಕಳಿಸಿದ್ದಲ್ಲಿ, ಅದನ್ನು ನೀವು ಕ್ಲಿಕ್ ಮಾಡಿ ಸ್ಪೀಕ್ ಬಟನ್ ಒತ್ತಿದರೆ ಮಾತ್ರ ವಾಟ್ಸಾಪ್ ಅದನ್ನು ಓದಿ ಹೇಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...