alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಫೀಚರ್ ಅಳವಡಿಸ್ತಿದೆ ವಾಟ್ಸಾಪ್

ಶೀಘ್ರದಲ್ಲೇ ಹೊಸ ಫೀಚರ್ ಅಳವಡಿಸಲು ವಾಟ್ಸಾಪ್ ಸಿದ್ಧತೆ ನಡೆಸಿದೆ. ಬಳಕೆದಾರರು ವಾಯ್ಸ್ ಕಾಲ್ ನಿಂದ ವಿಡಿಯೋ ಕಾಲ್ ಗೆ ಬದಲಾಯಿಸಬಹುದಾದ ಹೊಸ ಫೀಚರ್ ಇದಾಗಿದೆ. ಮಾತನಾಡುತ್ತಿರುವಂತೆಯೇ, ವಿಡಿಯೋ ಕಾಲ್ ಗೆ ಸ್ವಿಚ್ ಆನ್ ಆಗಬಹುದು. ಇದಕ್ಕಾಗಿ ವಾಟ್ಸಾಪ್ ಹೊಸ ಬಟನ್ ಅಳವಡಿಸುತ್ತಿದೆ.

ಆ್ಯಂಡ್ರಾಯ್ಡ್ 2.17.163 ಆವೃತ್ತಿಯಲ್ಲಿ ಫೀಚರ್ ಲಭ್ಯವಾಗಲಿದೆ. ಅಗತ್ಯವೆನಿಸಿದ್ರೆ ಅಪ್ ಕಮಿಂಗ್ ವಿಡಿಯೋ ಕಾಲ್ ಅನ್ನು ರಿಜೆಕ್ಟ್ ಮಾಡಬಹುದು. ಅಷ್ಟೇ ಅಲ್ಲ ನೇರವಾಗಿ ವಿಡಿಯೋ ಮ್ಯೂಟ್ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಕೂಡ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ.

ಈಗಾಗ್ಲೇ ಡಿಲೀಟ್ ಫಾರ್ ಎವರಿವನ್ ಆಪ್ಷನ್ ವಾಟ್ಸಾಪ್ ನಲ್ಲಿ ಲಭ್ಯವಿದೆ. ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಫೀಚರ್ ಕೂಡ ನೀಡ್ತಿದೆ ವಾಟ್ಸಾಪ್. ಐಪಾಡ್ ಬಳಕೆದಾರರಿಗಾಗಿಯೇ ವಿಶೇಷ ಫೀಚರ್ ಅಳವಡಿಸಲು ಕೂಡ ಮುಂದಾಗಿದೆ. ಭಾರತದಲ್ಲಿ 200 ಮಿಲಿಯನ್ ಗೂ ಅಧಿಕ ವಾಟ್ಸಾಪ್ ಬಳಕೆದಾರರಿದ್ದು, ವಿಶ್ವದಲ್ಲಿ ಒಟ್ಟು 1.2 ಬಿಲಿಯನ್ ಗ್ರಾಹಕರನ್ನು ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...