alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ವಾಟ್ಸಾಪ್

ಹೊಸ ವರ್ಷಾರಂಭದ ಮಧ್ಯರಾತ್ರಿಯೇ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಫೀಚರ್ ನಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಈ ಬದಲಾವಣೆ ನಂತ್ರ ಕೆಲ ಸ್ಮಾರ್ಟ್ಫೋನ್ ಹಾಗೂ ಆಪರೇಟಿಂಗ್ ಸಿಸ್ಟಂ ನಲ್ಲಿ ವಾಟ್ಸಾಪ್ ಕಾರ್ಯ ಸ್ಥಗಿತಗೊಳಿಸಲಿದೆ.  ಈ ಬಗ್ಗೆ ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ಬ್ಲ್ಯಾಕ್ಬೆರಿ ಆಪರೇಟಿಂಗ್ ಸಿಸ್ಟಂ, ಬ್ಲ್ಯಾಕ್ಬೆರಿ 10 ಹಾಗೂ ವಿಂಡೋಸ್ ಫೋನ್ 8.0 ಓಎಎಸ್ ನಲ್ಲಿ ವಾಟ್ಸಾಪ್ ಡಿಸೆಂಬರ್ 31ರ ನಂತ್ರ ಕಾರ್ಯನಿರ್ವಹಿಸುವುದಿಲ್ಲ. ಜೂನ್ ನಲ್ಲಿಯೇ ವಾಟ್ಸಾಪ್ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಿತ್ತು. ನಂತ್ರ ಗಡುವನ್ನು ಡಿಸೆಂಬರ್ ಗೆ ವಿಸ್ತರಿಸಿತ್ತು.

ಇದ್ರ ಜೊತೆಗೆ ಆ್ಯಪ್ ನೋಕಿಯಾ ಎಸ್ 40ಫೋನ್ ಗೂ ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. ಆಂಡ್ರಾಯ್ಡ್ ಹಳೆ ಆವೃತ್ತಿ ಫೋನ್ ಉಳ್ಳವರಿಗೆ ಕೂಡ ವಾಟ್ಸಾಪ್ ಬಳಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ ನ 2.3.7 ಜಿಂಜರ್ ಬ್ರೆಡ್ ಬಳಸುತ್ತಿರುವವರು 2020 ಫೆಬ್ರವರಿ 1ರವರೆಗೆ ಮಾತ್ರ ವಾಟ್ಸಾಪ್ ಬಳಸಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...