alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಶುರುವಾಗಿದೆ ಗ್ರೂಪ್ ವಿಡಿಯೋ ಕಾಲಿಂಗ್

ಫೇಸ್ಬುಕ್ ನ ತ್ವರಿತ ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಆರಂಭದಲ್ಲಿ ಆಡಿಯೋ ಕಾಲಿಂಗ್ ವ್ಯವಸ್ಥೆ ಶುರು ಮಾಡಿತ್ತು. ನಂತ್ರ ವಿಡಿಯೋ ಕಾಲಿಂಗ್ ಶುರುವಾಯ್ತು. ಈಗ ಗ್ರೂಪ್ ಕಾಲಿಂಗ್ ಗೆ ಅವಕಾಶ ನೀಡಿದೆ. ಡೆವಲಪರ್ ಕಾನ್ಫರೆನ್ಸ್ F8 ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ.

ಬಳಕೆದಾರರು ಗ್ರೂಪ್ ವಿಡಿಯೋ ಕಾಲಿಂಗ್ ಹಾಗೂ ಗ್ರೂಪ್ ಆಡಿಯೋ ಕಾಲಿಂಗ್ ಮಾಡಬಹುದಾಗಿದೆ. ವಾಟ್ಸಾಪ್ ಪ್ರಕಾರ, ಈಗಾಗಲೇ ಇದು ಜಾರಿಗೆ ಬಂದಿದೆ. ವಿಶ್ವಾದ್ಯಂತ ಐಒಎಸ್ ಬಳಕೆದಾರರು ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇದು ಲಭ್ಯವಾಗಿದೆ.

ಗ್ರೂಪ್ ಆಡಿಯೋ ಅಥವಾ ವಿಡಿಯೋ ಕರೆಯಲ್ಲಿ ಒಟ್ಟಿಗೆ ನಾಲ್ಕು ಮಂದಿ ಮಾತನಾಡಬಹುದಾಗಿದೆ. ಆರಂಭದಲ್ಲಿ ಎಂದಿನಂತೆ ಒಬ್ಬರ ಜೊತೆ ಮಾತನಾಡಬಹುದು. ನಂತ್ರ ಬೇರೆಯವರನ್ನು ಸೇರಿಸುತ್ತ ಹೋಗಬೇಕು. ಆ್ಯಡ್ ಪಾರ್ಟಿಸಿಪಂಟ್ ಬಟನ್ ಒತ್ತಿ ಇನ್ನೊಬ್ಬರನ್ನು ಗ್ರೂಪ್ ಕರೆಗೆ ಆಹ್ವಾನಿಸಬೇಕೆಂದು ಕಂಪನಿ ಹೇಳಿದೆ. ವಿಶ್ವದಾದ್ಯಂತ 1.5 ಶತಕೋಟಿ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಹೊಸ ಫೀಚರ್ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...