alex Certify
ಕನ್ನಡ ದುನಿಯಾ       Mobile App
       

Kannada Duniya

ಐದಕ್ಕಿಂತ ಹೆಚ್ಚು ಜನರಿಗೆ ಕಳಿಸಕ್ಕಾಗಲ್ಲ ವಾಟ್ಸಾಪ್ ಮೆಸ್ಸೇಜ್…!

ಇನ್ಮುಂದೆ ವಾಟ್ಸಾಪ್ ಬಳಕೆದಾರರು ಒಂದೇ ಸಂದೇಶವನ್ನು ಐದಕ್ಕಿಂತ ಹೆಚ್ಚು ಜನರಿಗೆ ಒಂದೇ ಬಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಬುಧವಾರ ವಾಟ್ಸಾಪ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಭಾರತದಲ್ಲಿ 20 ದಶಲಕ್ಷಕ್ಕಿಂತ ಹೆಚ್ಚು ಬಳಕೆದಾರರಿದ್ದು, ಸಂದೇಶ ಫಾರ್ವರ್ಡ್ ಮಾಡುವ ಮಿತಿಯನ್ನು ಐದಕ್ಕಿಳಿಸುವುದಾಗಿ ವಾಟ್ಸಾಪ್ ಹೇಳಿದೆ.

ನಕಲಿ ಹಾಗೂ ಪ್ರಚೋದನಕಾರಿ ವಿಷ್ಯಗಳ ಹರಡುವಿಕೆ ಮೇಲೆ ನಿಷೇಧ ಹೇರಲು ವಾಟ್ಸಾಪ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಒಂದು ತಿಂಗಳ ಹಿಂದೆಯೇ ಪ್ರಯೋಗ ಶುರು ಮಾಡಿರುವುದಾಗಿ ವಾಟ್ಸಾಪ್ ಹೇಳಿತ್ತು. ಬುಧವಾರದಿಂದ ಇದು ಜಾರಿಗೆ ಬಂದಿದೆ.

ವಾಟ್ಸಾಪ್ ನಲ್ಲಿ ನಕಲಿ ಹಾಗೂ ಪ್ರಚೋದಿತ ವಿಷ್ಯಗಳು ವೇಗವಾಗಿ ರವಾನೆಯಾಗ್ತಿವೆ ಎಂಬ ದೂರಿದೆ. ಸರ್ಕಾರ ಇದನ್ನು ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ಸೂಕ್ತ ಕ್ರಮಕ್ಕೆ ಮುಂದಾಗಿರುವ ವಾಟ್ಸಾಪ್ ಭಾರತದಲ್ಲಿ ಮಾತ್ರ ಈ ಮಿತಿ ಜಾರಿಗೊಳಿಸಿದೆ.

ವಿದೇಶಗಳಲ್ಲಿ ಒಬ್ಬ ವ್ಯಕ್ತಿ 20 ಜನರಿಗೆ ಫಾರ್ವರ್ಡ್ ಸಂದೇಶವನ್ನು ಒಮ್ಮೆಲೇ ಕಳುಹಿಸಬಹುದಾಗಿದೆ. ಫೇಸ್ಬುಕ್ ನಕಲಿ ಸಂದೇಶ ಕಳುಹಿಸದಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಫೇಸ್ಬುಕ್ ಮೂಲಕ ಜನರನ್ನು ಜಾಗೃತಗೊಳಿಸುವ ವಿಡಿಯೋ ರವಾನೆ ಮಾಡ್ತಿದೆ. ವಿಡಿಯೋ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...