alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂಗೆ ಟಕ್ಕರ್ ನೀಡಲಿದೆ ವಾಟ್ಸಾಪ್ ಹೊಸ ಫೀಚರ್

ವಾಟ್ಸಾಪ್ ಅಪ್ಲಿಕೇಷನ್ ಹೊಸ ಫೀಚರ್ ಒಂದನ್ನು ಇತ್ತೀಚಿಗಷ್ಟೇ ಶುರು ಮಾಡಿದೆ. ಭಾರತೀಯ ಬಳಕೆದಾರರಿಗೆ ಹೊಸ ಫೀಚರ್ ನಲ್ಲಿ ವಾಟ್ಸಾಪ್ ಪಾವತಿ ಆಯ್ಕೆಗಳನ್ನು ಪರಿಚಯಿಸಿದೆ. ವಾಸ್ತವವಾಗಿ ವಾಟ್ಸಾಪ್ ಈ ಫೀಚರ್ ವಾಟ್ಸಾಪ್ ಯುಪಿಐ ಆಧರಿಸಿದೆ.

ಹೊಸ ಆವೃತ್ತಿಯಲ್ಲಿ ಈ ಫೀಚರ್ ಸೇರಿಸಲಾಗಿದೆ. ಈ ಪಾವತಿ ಫೀಚರ್ ನಲ್ಲಿ ಬಳಕೆದಾರ ಯಾರಿಗೆ ಬೇಕಾದ್ರೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇದ್ರ ಪರೀಕ್ಷೆ ಸದ್ಯ ನಡೆಯುತ್ತಿದೆ. ಆದ್ರೆ ನೀವಿದನ್ನು ಈಗ್ಲೂ ಬಳಸಬಹುದಾಗಿದೆ. ಹೊಸ ಫೀಚರ್ QR ಕೋಡ್ ಆಗಿದೆ. QR ಸಂಕೇತವನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಕಳುಹಿಸಬಹುದು.

ಪೇಟಿಎಂನಲ್ಲಿ  QR ಸಂಕೇತವನ್ನು ಸ್ಕ್ಯಾನ್ ಮಾಡಿ  ಹಣ ಕಳುಹಿಸುವ ಫೀಚರ್ ಮೊದಲೇ ಇದೆ. ಈಗ ವಾಟ್ಸಾಪ್ ಕೂಡ ಈ ಫೀಚರ್ ಶುರುಮಾಡಿರುವುದ್ರಿಂದ ಪೇಟಿಎಂಗೆ ಹೊಡೆತ ಬೀಳುವ ಸಾಧ್ಯತೆಯಿದೆ. ವಾಟ್ಸಾಪ್ ನ 2.18.93 ಆವೃತ್ತಿಯಲ್ಲಿ QR ಕೋಡ್ ಆಯ್ಕೆಯನ್ನು ನೀಡಲಾಗಿದೆ. ಈ ಫೀಚರ್ ಮೂಲಕ ವಾಟ್ಸಾಪ್  ಪೇಮೆಂಟ್ ವಿಸ್ತಾರ ಮಾಡುವುದು ಕಂಪನಿ ಉದ್ದೇಶವಾಗಿದೆ. ಆದ್ರೆ ಇದು ಸುರಕ್ಷಿತವಲ್ಲವೆಂದು ಈಗಾಗ್ಲೇ ಪೇಟಿಎಂ ಸಂಸ್ಥಾಪಕರು ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...