alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಶುರು ಮಾಡ್ತಿದೆ ಹೊಸ ಫೀಚರ್

ವಾಟ್ಸಾಪ್ ಕೆಲ ದಿನಗಳಿಂದ ನವೀಕರಣದ ಜೊತೆ ಹೊಸ ಫೀಚರ್ ಗಳನ್ನು ಬಳಕೆದಾರರಿಗೆ ನೀಡ್ತಿದೆ. ಈಗ ಮತ್ತೊಂದು ಫೀಚರ್ ಸೇರಿಸಲು ನಿರ್ಧರಿಸಿದೆ. ಈ ಫೀಚರ್ ಆ್ಯಪಲ್ ಬಳಕೆದಾರರಿಗೆ ಲಭ್ಯವಾಗಲಿದೆ. ಡಬ್ಲ್ಯೂ ಎ ಬೀಟಾ ಇನ್ಫೋ ಮಾಹಿತಿ ಪ್ರಕಾರ, ವಾಟ್ಸಾಪ್ ಸದ್ಯವೇ ವಾಟ್ಸಾಪ್ ಟಚ್ ಐಡಿ ಹಾಗೂ ಫೇಸ್ ಐಡಿ ಫೀಚರ್ ಶುರು ಮಾಡ್ತಿದೆ.

ಈ ಹೊಸ ಫೀಚರ್ ಶುರುವಾದ್ಮೇಲೆ ನಿಮ್ಮ ವಾಟ್ಸಾಪ್ ಅಕೌಂಟನ್ನು ಬೇರೆಯವರು ಓಪನ್ ಮಾಡಲು ಸಾಧ್ಯವಿಲ್ಲ. ನಿಮ್ಮ ಮುಖ ನೋಡಿದ್ರೆ ಮಾತ್ರ ವಾಟ್ಸಾಪ್ ಓಪನ್ ಆಗಲಿದೆ. ವಾಟ್ಸಾಪ್ ಆ್ಯಪನ್ನು ಮತ್ತಷ್ಟು ಸುರಕ್ಷಿತಗೊಳಿಸಲು ಈ ಫೀಚರ್ ಶುರು ಮಾಡಲಾಗ್ತಿದೆ.

ಗೌಪ್ಯತಾ ಸೆಟ್ಟಿಂಗ್ ಅಡಿಯಲ್ಲಿ ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ. ಬಳಕೆದಾರರಿಗೆ ವಾಟ್ಸಾಪ್ ಐಡಿ ಓಪನ್ ಮಾಡಲು ಫೇಸ್ ಐಡಿ ಹಾಗೂ ಟಚ್ ಐಡಿ ಅನಿವಾರ್ಯವಾಗಲಿದೆ. ಟಚ್ ಐಡಿ 9 ಐಫೋನ್ ನಲ್ಲಿ ಲಭ್ಯವಿದೆ. ವಾಟ್ಸಾಪ್ ಹೊಸ ಫೀಚರ್ ಪರೀಕ್ಷೆ ನಡೆಸಿದೆ. ಐಫೋನ್ ಹಾಗೂ ಐಪ್ಯಾಡ್ ಮೇಲೆ ಪರೀಕ್ಷೆ ನಡೆಸಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...