alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಶುರು ಮಾಡಿದೆ ಮತ್ತೊಂದು ಫೀಚರ್

ವಾಟ್ಸಾಪ್ ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ ಶುರು ಮಾಡ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಆ್ಯಪ್ ನಲ್ಲಿ ಹೊಸ ಫೀಚರ್ ಶುರು ಮಾಡಿದೆ. ಇದು ಹಣಕಾಸಿನ ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸಿದೆ.

ಈ ಹೊಸ ಫೀಚರ್ ನಲ್ಲಿ ವಾಟ್ಸಾಪ್ ಮೂಲಕ ಸ್ನೇಹಿತರಿಂದ ಹಾಗೂ ವಾಟ್ಸಾಪ್ ಬಳಕೆದಾರರಿಂದ ಹಣವನ್ನು ಸ್ವೀಕಾರ ಮಾಡಬಹುದು. ಕೆಲ ದಿನಗಳ ಹಿಂದಷ್ಟೇ ವಾಟ್ಸಾಪ್ ಬಳಕೆದಾರರಿಗಾಗಿ ಕ್ಯೂಆರ್ ಕೋಡ್ ಫೀಚರ್ ನೀಡಿತ್ತು. ಇದನ್ನು ಸ್ಕ್ಯಾನ್ ಮಾಡಿ ಬಳಕೆದಾರರು ಹಣವನ್ನು ಕಳುಹಿಸಬಹುದಿತ್ತು.

ಈ ಫೀಚರ್ ಪಡೆಯಲು ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ ಗೆ ಹೋಗಬೇಕು. ಅದ್ರಲ್ಲಿ ಪೇಮೆಂಟ್ ಆಪ್ಶನ್ ಸಿಗಲಿದೆ. ಅದ್ರಲ್ಲಿ ನ್ಯೂ ಪೇಮೆಂಟ್ ಆಪ್ಶನ್ ಸೆಲೆಕ್ಟ್ ಮಾಡಬೇಕು. ಇದ್ರಲ್ಲಿ to UPI ID ಅಥವಾ  QR Code ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದ್ರೆ ನಿಮಗೆ ಮತ್ತೆರಡು ಆಪ್ಶನ್ ಸಿಗಲಿದೆ. ಅದ್ರಲ್ಲಿ ನೀವು ಹಣ ಕಳುಹಿಸಬಹುದು ಅಥವಾ ಹಣವನ್ನು ಸ್ವೀಕಾರ ಮಾಡಬಹುದು.

ಇದು ಕೆಲವೇ ಬಳಕೆದಾರರಿಗೆ ಲಭ್ಯವಿದೆ. ವಾಟ್ಸಾಪ್ ಬೀಟಾ ವರ್ಜನ್ ಬಳಸುತ್ತಿರುವವರಿಗೆ ಮಾತ್ರ ಸಿಗಲಿದೆ.ಶೀಘ್ರದಲ್ಲಿಯೇ ಎಲ್ಲರಿಗೂ ಈ ಫೀಚರ್ ಸಿಗಲಿದೆ ಎಂದು ವಾಟ್ಸಾಪ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...