alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ಶುರು ಮಾಡಿದೆ ಹೊಸ ಫೀಚರ್

ವಾಟ್ಸ್ ಅಪ್ ತನ್ನ ಸೆಟ್ಟಿಂಗ್ ನಲ್ಲಿ ದೊಡ್ಡ ಹಾಗೂ ವಿಶಿಷ್ಟ್ಯ ಫೀಚರ್ ಸೇರಿಸಲು ಮುಂದಾಗಿದೆ.ವಾಟ್ಸ್ ಅಪ್ ನ ಯಾವುದೇ ಗ್ರೂಪ್ ನಲ್ಲಿ ಎಡ್ಮಿನ್ ಕೆಲಸ ಪ್ರಮುಖವಾಗಲಿದೆ. ಇನ್ಮುಂದೆ ಗ್ರೂಪ್ ನ ಎಡ್ಮಿನ್ ಯಾರು? ಏನು ಹಾಕಬೇಕು? ಎಂಬುದನ್ನು ನಿರ್ಧರಿಸಲಿದ್ದಾರೆ.

ಈವರೆಗೆ ವಾಟ್ಸ್ ಅಪ್ ಗ್ರೂಪ್ ನ ಯಾವುದೇ ವ್ಯಕ್ತಿ ತನಗೆ ಬೇಕಾದ ಫೋಟೋ,ಸಂದೇಶವನ್ನು ಗ್ರೂಪ್ ಗೆ ಹಾಕಬಹುದಿತ್ತು. ಇನ್ಮುಂದೆ ಇದು ಸಾಧ್ಯವಿಲ್ಲ.ಕಳೆದ ಕೆಲ ದಿನಗಳಿಂದ ವಾಟ್ಸ್ ಅಪ್ ನಲ್ಲಿ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ಇದನ್ನು ನಿಯಂತ್ರಿಸಲು ವಾಟ್ಸ್ ಅಪ್ ಮಹತ್ವದ ನಿರ್ಣಯ ಕೈಗೊಂಡಿದೆ. ವಾಟ್ಸ್ ಅಪ್ ಗ್ರೂಪ್ ಎಡ್ಮಿನ್ ಗೆ ಮಹತ್ವದ ಸ್ಥಾನ ಸಿಗಲಿದೆ.

ವಾಟ್ಸ್ ಅಪ್ ಹೊಸ ಸೆಟ್ಟಿಂಗ್ ಗೆ `ಓನ್ಲಿ ಎಡ್ಮಿನ್’ ಹೆಸರು ನೀಡಲಾಗಿದೆ. ಇದ್ರ ಪ್ರಕಾರ ಎಡ್ಮಿನ್ ಹೊರತು ಯಾರೂ ಸಂದೇಶ ರವಾನಿಸಲು ಸಾಧ್ಯವಿಲ್ಲ.ಗ್ರೂಪ್ ನ ಎಡ್ಮಿನ್ ಇನ್ನೊಬ್ಬ ಸದಸ್ಯನನ್ನು ಎಡ್ಮಿನ್ ಆಗಿ ಆಯ್ಕೆ ಮಾಡಿಕೊಂಡರೆ ಆ ವ್ಯಕ್ತಿ ಮಾತ್ರ ಗ್ರೂಪ್ ಗೆ ಬಂದಿರುವ ಸಂದೇಶವನ್ನು ಬೇರೆ ಗ್ರೂಪ್ ಗೆ ಕಳುಹಿಸಬಹುದು. ಭಾರತದಂತ ದೇಶದಲ್ಲಿ ವಾಟ್ಸ್ ಅಪ್ ಮೂಲಕ ನಕಲಿ ಸುದ್ದಿಗಳು ರವಾನೆಯಾಗ್ತಿವೆ. ಇದ್ರಿಂದ ಅಪಾಯ ಹೆಚ್ಚಾಗ್ತಿದೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ವಾಟ್ಸ್ ಅಪ್ ಎಡ್ಮಿನ್ ಗೆ ಹೆಚ್ಚಿನ ಅಧಿಕಾರ ನೀಡಿದೆ.ವಾಟ್ಸ್ ಅಪ್ ಬೀಟಾ ಆವೃತ್ತಿ 2.18.201 ನಲ್ಲಿ ಹಾಗೂ ಐಫೋನ್ ನ ಸ್ಟೇಬಲ್ ವರ್ಜನ್  2.18.70 ನಲ್ಲಿ ಇದು ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...