alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್…! ಜಿಯೋ ಫೋನ್ ಗೆ ಬಂತು ವಾಟ್ಸಾಪ್

ಜಿಯೋ ಫೋನ್ ಬಳಕೆದಾರರಿಗೆ ಖುಷಿ ಸುದ್ದಿಯೊಂದು ಕಾದಿದೆ. ಜಿಯೋ ಫೋನ್ ಬಳಕೆದಾರರಿಗೆ ಇನ್ಮುಂದೆ ವಾಟ್ಸಾಪ್ ಸಿಗಲಿದೆ. ಬಳಕೆದಾರರು ಜಿಯೋ ಆ್ಯಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಫೋನ್ ಬಳಕೆದಾರರಿಗಾಗಿಯೇ ವಾಟ್ಸಾಪ್ ತನ್ನ ಹೊಸ ವರ್ಷನ್ ಬಿಡುಗಡೆ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಯ 41ನೇ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್-2 ಬಿಡುಗಡೆ ಮಾಡಲಾಗಿತ್ತು. ಇದ್ರ ಜೊತೆಗೆ ಜಿಯೋ ಫೋನ್ ಹಾಗೂ ಜಿಯೋ ಫೋನ್-2ನಲ್ಲಿ ವಾಟ್ಸಾಪ್ ಸೇರಿದಂತೆ ಫೇಸ್ಬುಕ್, ಗೂಗಲ್, ಯುಟ್ಯೂಬ್ ಲಭ್ಯವಿದೆ ಎಂದು ಅಧಿಕೃತ  ಘೋಷಣೆ ಮಾಡಲಾಗಿತ್ತು. ಆದ್ರೆ ಜಿಯೋ ಫೋನ್ -2 ಬಿಡುಗಡೆಯಾಗಿ ಅನೇಕ ದಿನಗಳಾದ್ರೂ ಫೋನ್ ಗೆ ವಾಟ್ಸಾಪ್ ಅಪ್ಡೇಟ್ ಆಗಿರಲಿಲ್ಲ. ಈಗ ಗ್ರಾಹಕರಿಗೆ ವಾಟ್ಸಾಪ್ ಸಿಗ್ತಿದೆ.

KaiOS ಆಪರೇಟಿಂಗ್ ಸಿಸ್ಟಂನಲ್ಲಿ ಜಿಯೋ ಫೋನ್ ಕೆಲಸ ಮಾಡಲಿದೆ. ವಾಟ್ಸಾಪ್ ಸೆಪ್ಟೆಂಬರ್ 10ರಿಂದ ಜಿಯೋಫೋನ್ ನಲ್ಲಿ ಲಭ್ಯವಿದೆ. ಗ್ರಾಹಕರಿಗೆ ಸೆಪ್ಟೆಂಬರ್ 20ರಿಂದ ಸಿಗಲಿದೆ ಎನ್ನಲಾಗ್ತಿದೆ. ಭಾರತದಲ್ಲಿ ಅತಿ ಹೆಚ್ಚು ಜನರು ವಾಟ್ಸಾಪ್ ಬಳಕೆ ಮಾಡ್ತಾರೆ. ಇನ್ಮುಂದೆ ಜಿಯೋ ಫೋನ್ ನಲ್ಲಿಯೂ ವಾಟ್ಸಾಪ್ ಸಿಗಲಿದೆ. ಜಿಯೋ ಫೋನ್ ಗ್ರಾಹಕರೂ ವಾಟ್ಸಾಪ್ ಲಾಭ ಪಡೆಯಬಹುದು ಎಂದು ವಾಟ್ಸಾಪ್ ಉಪಾಧ್ಯಕ್ಷರು ಹೇಳಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...