alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ವಿಡಿಯೋ ಕಾಲಿಂಗ್ ನಲ್ಲಿ ನಾವೇ ಫಸ್ಟ್

rtr4tkzb_222_1494264496_749x421

ಅನೇಕ ಪರೀಕ್ಷೆಗಳ ನಂತ್ರ ವಾಟ್ಸ್ ಅಪ್ ಕಳೆದ ವರ್ಷ ನವೆಂಬರ್ ನಲ್ಲಿ ವಿಶ್ವದಾದ್ಯಂತ ಇರುವ ಬಳಕೆದಾರರಿಗಾಗಿ ವಿಡಿಯೋ ಕಾಲಿಂಗ್ ಅಪ್ಲಿಕೇಷನ್ ಶುರುಮಾಡಿದೆ. ಆರು ವರ್ಷಗಳ ನಂತ್ರ ಕಂಪನಿ ಯಾವ ದೇಶದಲ್ಲಿ ಅತಿ ಹೆಚ್ಚು ವಿಡಿಯೋ ಕಾಲಿಂಗ್ ಬಳಕೆಯಾಗ್ತಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ. ವಿಡಿಯೋ ಕಾಲಿಂಗ್ ಲಾಭವನ್ನು ಅತಿಹೆಚ್ಚಾಗಿ ಭಾರತೀಯರು ಪಡೆಯುತ್ತಿದ್ದಾರೆಂದು ಕಂಪನಿ ಹೇಳಿದೆ.

ಭಾರತದಲ್ಲಿ ಪ್ರತಿ ದಿನ 50 ಮಿಲಿಯನ್ ನಿಮಿಷಗಳ ಕಾಲ ವಿಡಿಯೋ ಕಾಲಿಂಗ್ ಮಾಡಲಾಗ್ತಾ ಇದೆ. ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತ ವಿಡಿಯೋ ಕಾಲಿಂಗ್ ವಿಚಾರದಲ್ಲಿ ಮುಂದಿದೆ ಎಂದು ಕಂಪನಿ ಹೇಳಿದೆ. ವಿಶ್ವದಾದ್ಯಂತ 1.2 ಬಿಲಿಯನ್ ಆ್ಯಕ್ಟಿವ್ ವಾಟ್ಸ್ ಅಪ್ ಬಳಕೆದಾರರಿದ್ದಾರೆ. ಭಾರತದಲ್ಲಿ ಪ್ರತಿ ತಿಂಗಳು 200 ಮಿಲಿಯನ್ ಬಳಕೆದಾರರು ವಾಟ್ಸ್ ಅಪ್ ನಲ್ಲಿ ಸಕ್ರಿಯರಾಗಿದ್ದಾರೆ.

ವಿಶ್ವದಾದ್ಯಂತ ವಿಡಿಯೋ ಕಾಲಿಂಗ್ ಅತಿ ವೇಗದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. 55 ಮಿಲಿಯನ್ ಬಳಕೆದಾರರು ಪ್ರತಿದಿನ ವಿಡಿಯೋ ಕಾಲಿಂಗ್ ಮಾಡ್ತಿದ್ದಾರೆ. 340 ಮಿಲಿಯನ್ ನಿಮಿಷ ಪ್ರತಿದಿನ ರೆಕಾರ್ಡ್ ಆಗ್ತಾ ಇದೆ. ಇದ್ರಲ್ಲಿ 50 ಮಿಲಿಯನ್ ನಿಮಿಷ ಭಾರತದಲ್ಲಿಯೇ ರೆಕಾರ್ಡ್ ಆಗ್ತಿದೆ ಎಂದು ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...