alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗ್ರೂಪ್ ಸದಸ್ಯರು ತಿಳಿದುಕೊಳ್ಳಬೇಕಾದ ಸುದ್ದಿ

ವಾಟ್ಸಾಪ್ ಇದ್ಮೇಲೆ ಗ್ರೂಪ್ ನಲ್ಲಿ ಇದ್ದೇ ಇರ್ತಿರಾ. ಒಂದಲ್ಲ ಒಂದು ಗುಂಪಿನ ಸದಸ್ಯರು ಇಲ್ಲ ಅಡ್ಮಿನ್ ನೀವಾಗಿದ್ದರೆ ಈ ವಿಷ್ಯವನ್ನು ನೀವು ಅವಶ್ಯವಾಗಿ ತಿಳಿದಿರಬೇಕು. ವಾಟ್ಸಾಪ್, ಗ್ರೂಪ್ ಅಡ್ಮಿನ್ ಗೆ ವಿಶೇಷ ಅಧಿಕಾರ ನೀಡ್ತಾಯಿದೆ. ಇದ್ರ ಪ್ರಕಾರ, ಗ್ರೂಪ್ ನ ಐಕಾನ್, ವಿವರಣೆ ಹಾಗೂ ವಿಷಯವನ್ನು ಯಾರು ಬದಲಾಯಿಸಬಹುದು ಹಾಗೆ ಯಾರು ಬದಲಾಯಿಸಬಾರದು ಎಂಬುದನ್ನು ಅಡ್ಮಿನ್ ನಿರ್ಧರಿಸುತ್ತಾನೆ. ಅಂದ್ರೆ ಗ್ರೂಪ್ ಐಕಾನ್ ಬದಲಾವಣೆ ಎಲ್ಲರಿಗೂ ಸಾಧ್ಯವಿಲ್ಲ. ಅಡ್ಮಿನ್ ಒಪ್ಪಿಗೆ ನೀಡಿದ್ರೆ ಮಾತ್ರ ಸದಸ್ಯರು ಬದಲಾವಣೆ ಮಾಡಬಹುದು.

ವಾಟ್ಸಾಪ್ ಅಧಿಕೃತ ಟ್ವೀಟರ್ ಮೂಲಕ ಈ ವಿಷ್ಯವನ್ನು ಹೇಳಿದೆ. ಗ್ರೂಪ್ ಅಡ್ಮಿನ್ ಗಳಿಗಾಗಿ ವಿಶೇಷ ಫೀಚರ್ ಶುರುಮಾಡ್ತಿದೆಯಂತೆ. ಇದ್ರ ಪ್ರಕಾರ ಗ್ರೂಪ್ ಆರಂಭಿಸಿದ ವ್ಯಕ್ತಿ ಬೇರೆ ಅಡ್ಮಿನ್ ಸದಸ್ಯರು ಗ್ರೂಪ್ ಡಿಲೀಟ್ ಮಾಡುವುದನ್ನು ತಡೆಯಬಹುದಾಗಿದೆ. ಅಂದ್ರೆ ಯಾರು ಗ್ರೂಪ್ ಶುರುಮಾಡಿರುತ್ತಾರೋ ಅವರಿಗೆ ಮಾತ್ರ ಗ್ರೂಪ್ ಡಿಲೀಟ್ ಮಾಡುವ ವಿಶೇಷ ಅಧಿಕಾರವಿರುತ್ತದೆ.

ಸದ್ಯ ಇದ್ರ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಆಂಡ್ರಾಯ್ಡ್ ಬಳಕೆದಾರರು ಇದ್ರ ಲಾಭ ಪಡೆಯಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ವಾಟ್ಸಾಪ್ ಲೈವ್ ಅಪ್ಡೇಟ್ ಫೀಚರ್ ಶುರುಮಾಡಿದೆ. ಇದ್ರಲ್ಲಿ ಬಳಕೆದಾರರು ತಾವಿರುವ ಸ್ಥಳವನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...