alex Certify
ಕನ್ನಡ ದುನಿಯಾ       Mobile App
       

Kannada Duniya

‘ವಾಟ್ಸಾಪ್’ ಬಳಕೆದಾರರೇ ಎಚ್ಚರ: ತಪ್ಪದೇ ಓದಿ ಈ ಸುದ್ದಿ

ಸಾಮಾಜಿಕ ಜಾಲತಾಣ ವಾಟ್ಸಾಪ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಕಳೆದ ಕೆಲ ದಿನಗಳಿಂದ ಬರುತ್ತಿರುವ ಸಂದೇಶವೊಂದನ್ನು ಹಿಂದೆ ಮುಂದೆ ಯೋಚಿಸದೆ ಅಪ್ಪಿ ತಪ್ಪಿ ಡೌನ್ಲೋಡ್ ಮಾಡಿಕೊಂಡರೆ ಸಂಕಷ್ಟಕ್ಕೆ ಸಿಲುಕಲಿದ್ದೀರಿ.

ಹೌದು….. ಕಳೆದ ಕೆಲ ದಿನಗಳಿಂದ ವಾಟ್ಸಾಪ್ ಗೋಲ್ಡ್/ವಾಟ್ಸಾಪ್ ಪ್ಲಸ್ ಆಪ್ ಬಳಕೆ ಮಾಡಿ ಎಂಬ ಸಂದೇಶ ಹರಿದಾಡುತ್ತಿದ್ದು, ಆದರೆ ಇವುಗಳು ನಕಲಿ ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಇವುಗಳನ್ನು ಡೌನ್ಲೋಡ್ ಮಾಡಿಕೊಂಡರೆ ಸುಲಭವಾಗಿ ಹ್ಯಾಕರ್ ಗಳ ಬಲೆಗೆ ಬೀಳಲಿದ್ದೀರಿ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆಯೂ ಇಂಥ ಸಂದೇಶ ಹರಿದಾಡಿದ್ದು, ಈಗ ಮತ್ತೆ ಇದು ವ್ಯಾಪಕವಾಗುತ್ತಿದೆ. ವಾಟ್ಸಾಪ್ ಗೋಲ್ಡ್/ವಾಟ್ಸಾಪ್ ಪ್ಲಸ್ ಆಪ್ ಡೌನ್ಲೋಡ್ ಮಾಡಿಕೊಂಡರೆ ಪ್ರೀಮಿಯಂ ಫೀಚರ್ ಸಿಗಲಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಆದರೆ ಈ ನಕಲಿ ಆಪ್ ಗಳಿಂದ ನಿಮ್ಮ ಸ್ಮಾರ್ಟ್ ಫೋನ್ ಗೆ ವೈರಸ್ ತಟ್ಟುವ ಸಾಧ್ಯತೆ ಇರುತ್ತದಲ್ಲದೆ ಫೋನ್ ನಲ್ಲಿ ಇರುವ ಖಾಸಗಿ ಮಾಹಿತಿಗಳು ಸುಲಭವಾಗಿ ಹ್ಯಾಕರ್ ಗಳ ಪಾಲಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...