alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಮೂಲಕ ಕತ್ತಲಲ್ಲೂ ಸೆಲ್ಫಿ ತಗೊಳ್ಳಿ….

wats app selfieಈಗ ಎಲ್ಲರಿಗೂ ಸೆಲ್ಫಿ ಹುಚ್ಚು. ಸೆಲ್ಫಿ ತೆಗೆದುಕೊಂಡು ಪ್ರೊಫೈಲ್ ಫೋಟೋ ಅಪ್ ಡೇಟ್ ಮಾಡುವ ಕ್ರೇಝ್. ಬಳಕೆದಾರರ ನೆಚ್ಚಿನ ಹವ್ಯಾಸವನ್ನು ವಾಟ್ಸಾಪ್ ಕೂಡ ನೀರೆರೆದು ಪೋಷಿಸ್ತಾ ಇದೆ. ಬೇರೆ ಮೆಸೇಜಿಂಗ್ ಆ್ಯಪ್ ಗಳು ತನ್ನನ್ನು ಹಿಂದಿಕ್ಕಬಹುದು ಅನ್ನೋ ಆತಂಕದಲ್ಲಿ ಹೊಸ ಹೊಸ ಫೀಚರ್ಸ್ ಅನ್ನು ವಾಟ್ಸ್ ಆ್ಯಪ್ ನಲ್ಲಿ ಪರಿಚಯಿಸಲಾಗ್ತಿದೆ.

ಇತ್ತೀಚೆಗಷ್ಟೆ ಡೂಡಲ್ ಆಪ್ಷನ್ ನೀಡಿದ್ದ ವಾಟ್ಸ್ ಆ್ಯಪ್ ನಲ್ಲಿ ಈಗ ಸೆಲ್ಫಿ ಫ್ಲ್ಯಾಶ್ ಕೂಡ ಇದೆ. ಕಾರ್ಗತ್ತಲಲ್ಲೂ ನೀವು ಇನ್ಮೇಲೆ ಸೆಲ್ಫಿ ತೆಗೆದುಕೊಳ್ಳಬಹುದು. ಅಷ್ಟಕ್ಕೂ ಇದು ಹೊಸ ಫೀಚರ್ ಏನಲ್ಲ, ಈಗಾಗ್ಲೇ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಸೆಲ್ಫಿ ಫ್ಲ್ಯಾಶ್ ಆಪ್ಷನ್ ಇದೆ. ಕ್ಯಾಮರಾದ ಫ್ರಂಟ್ ಫೇಸಿಂಗ್ ಸೆನ್ಸಾರ್ ಅನ್ನು ಆನ್ ಮಾಡಿದ್ರೆ ನೀವು ವಾಟ್ಸ್ ಆ್ಯಪ್ ಸೆಲ್ಫಿ ತೆಗೆದುಕೊಳ್ಳಬಹುದು. ಇಲ್ಲಿ ಡಿಸ್ ಪ್ಲೇ ಪ್ಯಾನಲ್ ಫ್ಲಾಶ್ ನಂತೆ ಬಳಕೆಯಾಗುತ್ತೆ. ಫ್ರಂಟ್ ಫೇಸಿಂಗ್ ಎಲ್ ಇ ಡಿ ಫ್ಲ್ಯಾಶ್ ಇಲ್ಲದೇ ಇದ್ರೂ ನೀವು ಕತ್ತಲಲ್ಲಿ ಸೆಲ್ಫಿ ಕ್ಲಿಕ್ಕಿಸಬಹುದು.

ಎಡಭಾಗದ ಕ್ಯಾಪ್ಚರ್ ಬಟನ್ ಬಳಿ ನಿಮಗೆ ಫ್ಲ್ಯಾಶ್ ಐಕಾನ್ ಕಾಣಿಸುತ್ತೆ. ಅದನ್ನು ನೀವು ಆನ್ ಮಾಡಬೇಕು. ಆದ್ರೆ ಸೆಲ್ಫಿ ಕ್ಲ್ಯಾರಿಟಿ ನಿಮ್ಮ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಮೇಲೆ ಆಧಾರಿತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...