alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್- 2 ನಲ್ಲಿ ವಾಟ್ಸಾಪ್ ಬಳಸಲು ಗ್ರಾಹಕರು ಕಾಯ್ಲೇಬೇಕು

ಹಿಂದಿನ ತಿಂಗಳು ನಡೆದ ರಿಲಾಯನ್ಸ್ ಇಂಡಸ್ಟ್ರಿಯ 41 ನೇ ವಾರ್ಷಿಕ ಸಭೆಯಲ್ಲಿ ಜಿಯೋ-2 ಫೋನ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15 ರಿಂದ ಬುಕ್ಕಿಂಗ್ ಕೂಡ ಶುರುವಾಗಿದೆ. ಆದ್ರೆ ವಾಟ್ಸಾಪ್ ಪ್ರಿಯರಿಗೆ ಸ್ವಲ್ಪ ಬೇಸರವಾಗಿದೆ. ಜಿಯೋ ಫೀಚರ್ ಫೋನ್ ಹಾಗೂ ಜಿಯೋ ಫೋನ್-2 ನಲ್ಲಿ ವಾಟ್ಸಾಪ್, ಫೇಸ್ಬುಕ್ ಹಾಗೂ ಯುಟ್ಯೂಬ್ ಬಳಸಬಹುದೆಂದು ಹೇಳಲಾಗಿತ್ತು. ಆದ್ರೆ ಇನ್ನೂ ವಾಟ್ಸಾಪ್ ಅಪ್ಡೇಟ್ ಆಗಿಲ್ಲ.

ಮೂಲಗಳ ಪ್ರಕಾರ, ವಾಟ್ಸಾಪ್ ಬಳಸಲು ಗ್ರಾಹಕರು ಇನ್ನಷ್ಟು ದಿನ ಕಾಯಬೇಕಿದೆ. ಜಿಯೋ ಫೋನ್ ಹಾಗೂ ಜಿಯೋ ಫೋನ್-2 ನಲ್ಲಿ ವಾಟ್ಸಾಪ್ ಈ ವಾರ ಸಿಗಬೇಕಿತ್ತು. ಆದ್ರೆ ಯುಟ್ಯೂಬ್ ಮಾತ್ರ ಸದ್ಯ ಜಿಯೋ ಫೋನ್ ಹಾಗೂ ಜಿಯೋ ಫೋನ್ 2 ನಲ್ಲಿ ಸಿಗಲಿದೆ. ಗ್ರಾಹಕರು ಯುಟ್ಯೂಬ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಸಿಸ್ಟಂ ಇನ್ನೊಮ್ಮೆ ನವೀಕರಣವಾದ ಮೇಲೆ ಬಳಕೆದಾರರಿಗೆ ವಾಟ್ಸಾಪ್ ಸಿಗಲಿದೆಯಂತೆ.

ಜಿಯೋ ಫೋನ್-2 ಡ್ಯುಯೆಲ್ ಸಿಮ್ ಹೊಂದಿದೆ. 2.4 ಇಂಚಿನ QVGA ಡಿಸ್ಪ್ಲೇಯನ್ನು ಫೋನ್ ಹೊಂದಿದೆ. 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಸ್ಟೋರೇಜ್ ನೀಡಲಾಗಿದೆ. ಕಾರ್ಡ್ ಮೂಲಕ ಇದನ್ನು 128 ಜಿಬಿ ಯವರೆಗೆ ವಿಸ್ತರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...