alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ವಾಟ್ಸಾಪ್ ಆಪ್ ಕೂಡ ನಕಲೀನಾ…?

ಗೂಗಲ್ ಭದ್ರತೆ ಕಣ್ಣುತಪ್ಪಿಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಕಲಿ ಆಪ್ ಗಳು ಬಂದು ಸೇರ್ತಿವೆ. ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ನಕಲಿ ಅಪ್ಲಿಕೇಷನ್ ಲಭ್ಯವಾಗಿದೆ. ಇದನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮಾಹಿತಿ ಪ್ರಕಾರ ಗೂಗಲ್ ಆಪ್ ನಲ್ಲಿ ವಾಟ್ಸಾಪ್ ಅಪ್ಡೇಟ್ ಹೆಸರಿನ ನಕಲಿ ಆಪ್ ಸಿಗ್ತಿದೆ.

ಆಶ್ಚರ್ಯವೆಂದ್ರೆ ಅಸಲಿ ವಾಟ್ಸಾಪ್ ಡೆವಲಪರ್ ಹೆಸರಿನಲ್ಲಿಯೇ ನಕಲಿ ವಾಟ್ಸಾಪ್ ಇದೆ. WhatsApp Inc ಡೆವಲಪರ್ ಹೆಸರಿನಲ್ಲಿಯೇ ನಕಲಿ ವಾಟ್ಸಾಪ್ ಕೂಡ ಇರೋದ್ರಿಂದ ಜನರಿಗೆ ಇದು ಗೊತ್ತಾಗಲಿಲ್ಲ. ಆದ್ರೆ ವಾಟ್ಸಾಪ್ ಬಳಕೆದಾರರೊಬ್ಬರು ಇದ್ರ ಬಗ್ಗೆ ಮೊದಲು ಶಂಕೆ ವ್ಯಕ್ತಪಡಿಸಿದ್ದರು.

ಅಪ್ಡೇಟ್ ವಾಟ್ಸಾಪ್ ಡೌನ್ಲೋಡ್ ಮಾಡಿದವರೆಲ್ಲ ನಷ್ಟ ಅನುಭವಿಸಿದ್ದಾರೆಂದು ಬಳಕೆದಾರ ಹೇಳಿದ್ದ ಎನ್ನಲಾಗಿದೆ. ಇದ್ರ ಬಗ್ಗೆ ವಿಚಾರಣೆ ನಡೆಸಿದಾಗ ನಕಲಿ ವಾಟ್ಸಾಪ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ ಈ ನಕಲಿ ವಾಟ್ಸಾಪ್ ಡೆವಲಪ್ ಮಾಡಿದ್ಯಾರು ಎನ್ನುವ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಇದನ್ನು ಗೂಗಲ್ ಗಂಭೀರವಾಗಿ ಪರಿಗಣಿಸಿದ್ದು ಗೂಗಲ್ ಪ್ಲೇ ಸ್ಟೋರ್ ಗೆ ಹೇಗೆ ಬಂತು ಎನ್ನುವ ಬಗ್ಗೆ ತನಿಖೆ ನಡೆಸ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...