alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಮಾಡ್ಬಹುದು ಗ್ರೂಪ್ ಕಾಲಿಂಗ್….

ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಸದ್ಯದಲ್ಲೇ ಗ್ರೂಪ್ ವಿಡಿಯೋ ಮತ್ತು ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಪರಿಚಯಿಸಲಿದೆ. ಈಗಾಗ್ಲೇ ಫೇಸ್ಬುಕ್ ನ ಮೆಸೆಂಜರ್ ನಲ್ಲಿ ಈ ಗ್ರೂಪ್ ಕಾಲಿಂಗ್ ಆಪ್ಷನ್ ಲಭ್ಯವಿದೆ. ಹಾಗಾಗಿ ವಾಟ್ಸಾಪ್ ನಲ್ಲೂ ಶೀಘ್ರವೇ ಇದನ್ನು ಅಳವಡಿಸಲು ನಿರ್ಧರಿಸಲಾಗಿದೆ.

2.17.70 iOS ಅಪ್ಡೇಟ್ ನಲ್ಲಿ ಈ ಹೊಸ ಫೀಚರ್ ಲಭ್ಯವಾಗಲಿದೆ. ವಾಟ್ಸಾಪ್ 2.17.70, ಬಳಕೆದಾರರ ಗ್ರೂಪ್ ಕಾಲ್ ಬಗ್ಗೆ ಸರ್ವರ್ ಗೆ ರಿಕ್ವೆಸ್ಟ್ ಕಳಿಸುತ್ತದೆ. ವಾಟ್ಸಾಪ್ v2.17.387  ಬೇಟಾ ಫಾರ್ ಆ್ಯಂಡ್ರಾಯ್ಡ್ ನಲ್ಲಿ ಕೂಡ ಹೊಸ ಫೀಚರ್ ಅಳವಡಿಸಲಾಗಿದೆ.

ಗ್ರೂಪ್ ನ ಸದಸ್ಯರು ಗ್ರೂಪ್ ಐಕಾನ್ ಬದಲಾಯಿಸಬಹುದಾಗಿದೆ. ಹೆಸರನ್ನು ಕೂಡ ಬದಲು ಮಾಡಲು ಅವಕಾಶವಿದೆ. ಇನ್ನೊಬ್ಬ ಅಡ್ಮಿನಿಸ್ಟ್ರೇಟರ್, ಗ್ರೂಪ್ ಕ್ರಿಯೇಟರ್ ನನ್ನು ಡಿಲೀಟ್ ಮಾಡದಂತೆ ಕೂಡ ತಡೆಯಬಹುದು. ಅನ್ ಸೆಂಟ್ ಹಾಗೂ ಡಿಲೀಟ್ ಫಾರ್ ಎವರಿವನ್ ಆಪ್ಷನ್ ಕೂಡ ಪರಿಶೀಲನೆಯ ಹಂತದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...