alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಫೈಲ್ ಹೀಗೆ ಡೌನ್ಲೋಡ್ ಮಾಡಿ

ವಾಟ್ಸಾಪ್ ನಲ್ಲಿ ಬಂದ ಕೆಲ ಸಂದೇಶಗಳು ತಪ್ಪಾಗಿ ಡಿಲೀಟ್ ಆಗಿರುತ್ತವೆ. ಅದು ಮತ್ತೆ ಬೇಕೆಂದ್ರೆ ಸಿಗೋದಿಲ್ಲ. ಅಯ್ಯೋ ಡಿಲೀಟ್ ಆಗೋಯ್ತು ಅಂತಾ ಇನ್ಮುಂದೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ವಾಟ್ಸಾಪ್ ಬಳಕೆದಾರರ ಸಮಸ್ಯೆ ಬಗೆಹರಿಸಲು ಹೊಸ ಫೀಚರ್ ಶುರು ಮಾಡಿದೆ.

ಡಿಲೀಟ್ ಫಾರ್ ಎವರ್ ಫೀಚರ್ ನಲ್ಲಿ ಅಪ್ಡೇಟ್ ಮಾಡಲಾಗಿದೆ. WABetaInfo ಪ್ರಕಾರ ಬಳಕೆದಾರರು ಡಿಲೀಟ್ ಆಗಿರುವ ಫೋಟೋ, ವಿಡಿಯೋ, ಫೈಲನ್ನು ವಾಟ್ಸಾಪ್ ಆ್ಯಪ್ ಸರ್ವರ್ ನಿಂದ ಮತ್ತೆ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಕೆದಾರರು ಡೌನ್ಲೋಡ್ ಮಾಡಿದ ನಂತ್ರವೂ ಅದು ಸರ್ವರ್ ನಲ್ಲಿ ಸೇವ್ ಆಗಿರುತ್ತದೆ.

ಈವರೆಗೆ ಬಳಕೆದಾರರು ಡೌನ್ಲೋಡ್ ಮಾಡದ ಫೋಟೋ, ವಿಡಿಯೋ ಮಾತ್ರ ವಾಟ್ಸಾಪ್ ಸರ್ವರ್ ನಲ್ಲಿ 30 ದಿನ ಇರುತ್ತಿತ್ತು. ಡೌನ್ಲೋಡ್ ಮಾಡಿದ ಫೋಟೋ, ವಿಡಿಯೋ ಸರ್ವರ್ ನಿಂದ ಡಿಲೀಟ್ ಆಗ್ತಿತ್ತು. ಆದ್ರೆ ಇನ್ಮುಂದೆ ವಾಟ್ಸಾಪ್ ಸರ್ವರ್ ನಲ್ಲಿ ಬಳಕೆದಾರರು ಡೌನ್ಲೋಡ್ ಮಾಡಿದ್ದರೂ ವಿಡಿಯೋ, ಫೋಟೋ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...