alex Certify
ಕನ್ನಡ ದುನಿಯಾ       Mobile App
       

Kannada Duniya

ಬಳಕೆದಾರರಿಗೆ ಲಾಕ್ ವಾಯ್ಸ್ ಮೆಸ್ಸೇಜ್ ರೆಕಾರ್ಡಿಂಗ್ ಆಯ್ಕೆ ನೀಡಿದ ವಾಟ್ಸಾಪ್

ವಾಟ್ಸಾಪ್, ಆಂಡ್ರಾಯ್ಡ್ ಗ್ರಾಹಕರಿಗಾಗಿ ಹೊಸ ಬೀಟಾ ವರ್ಶನ್ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ ನಲ್ಲಿ ಬಳಕೆದಾರರು ವಾಯ್ಸ್ ಮೆಸ್ಸೇಜ್ ರೆಕಾರ್ಡಿಂಗ್ ಲಾಕ್ ಮಾಡಬಹುದಾಗಿದೆ. ಇದ್ರಿಂದ ಬಳಕೆದಾರರಿಗೆ ಧ್ವನಿ ಸಂದೇಶ ಕಳುಹಿಸುವುದು ಸುಲಭವಾಗಲಿದೆ.

ವಾಟ್ಸಾಪ್ ಇದ್ರ ಜೊತೆಗೆ ಧ್ವನಿ ಸಂದೇಶ ಕಳುಹಿಸುವ ಮೊದಲು ಪೂರ್ವ ವೀಕ್ಷಣೆ ಆಯ್ಕೆಯನ್ನೂ ಶುರು ಮಾಡಿದೆ. ಲಾಕ್ ವಾಯ್ಸ್ ರೆಕಾರ್ಡಿಂಗ್ ನಲ್ಲಿ ಬಳಕೆದಾರರು ಮೈಕ್ ಬಟನ್ ಒತ್ತಿ ಹಿಡಿಯುವ ಅಗತ್ಯವಿಲ್ಲ. ಲಾಕ್ ಮಾಡಿ ವಾಯ್ಸ್ ಮೆಸ್ಸೇಜ್ ರೆಕಾರ್ಡ್ ಮಾಡಲು ಬಯಸಿದ್ರೆ ಮೈಕ್ ಬಟನ್ ಮೇಲೆ 0.5 ಸೆಕೆಂಡ್ ಒತ್ತಿ ಹಿಡಿಯಬೇಕು. ನಂತ್ರ ಲೈಕ್ ಐಕಾನ್ ಮೇಲೆ ಸ್ವೈಪ್ ಅಪ್ ಮಾಡಬೇಕು.

ಇದ್ರ ನಂತ್ರ ವಾಯ್ಸ್ ಮೆಸ್ಸೇಜ್ ಲಾಕ್ ಆಗಲಿದೆ. ಸುಲಭವಾಗಿ ವಾಯ್ಸ್ ಮೆಸ್ಸೇಜ್ ರೆಕಾರ್ಡನ್ನು ಕಳುಹಿಸಬಹುದಾಗಿದೆ. ಹಿಂದಿನ ವರ್ಷ ನವೆಂಬರ್ ನಲ್ಲಿಯೇ iOS ಗೆ ಈ ಆಯ್ಕೆ ನೀಡಲಾಗಿತ್ತು. ಆದ್ರೆ ಆಂಡ್ರಾಯ್ಡ್ ಬಳಕೆದಾರರು ವಾಯ್ಸ್ ಕಾಲ್ ರೆಕಾರ್ಡ್ ಮಾಡಲು ಮೈಕ್ ಬಟನ್ ಒತ್ತಿ ಹಿಡಿಯಬೇಕಿತ್ತು. ಇದ್ರಿಂದ ಮೆಸ್ಸೇಜ್ ರೆಕಾರ್ಡ್ ಆಗಲು ಸ್ವಲ್ಪ ತೊಂದರೆಯಾಗ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...