alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಮೆಂಟ್ ಸೇವೆಗೂ ಮೊದಲು ವಾಟ್ಸಾಪ್ ಬದಲಿಸ್ತು ಗೌಪ್ಯತೆ ನೀತಿ

ವಾಟ್ಸಾಪ್ ಪೇಮೆಂಟ್ ಫೀಚರ್ ಜಾರಿಗೆ ತರುತ್ತೆ ಎನ್ನುವ ಬಗ್ಗೆ ಅನೇಕ ದಿನಗಳಿಂದ ಸುದ್ದಿಯಿದೆ. ಪೇಮೆಂಟ್ ಫೀಚರ್ ಟೆಸ್ಟಿಂಗ್ ನಡೆಯುತ್ತಿದೆ ಎಂದು ಈಗಾಗಲೇ ವಾಟ್ಸಾಪ್ ಹೇಳಿದೆ. 10 ಲಕ್ಷ ಜನರ ಮೂಲಕ ವಾಟ್ಸಾಪ್ ಪೇಮೆಂಟ್ ಫೀಚರ್ ಟೆಸ್ಟಿಂಗ್ ಮಾಡ್ತಿದೆ. ಇದ್ರ ಜೊತೆಗೆ ಪೇಮೆಂಟ್ ಫೀಚರ್ ಶುರು ಮಾಡುವ ಮೊದಲು ವಾಟ್ಸಾಪ್  ಗೌಪ್ಯತೆ ನೀತಿಯನ್ನು ಬದಲಿಸುವುದಾಗಿ ಹೇಳಿದೆ.

ವಾಟ್ಸಾಪ್  ಪೇಮೆಂಟ್ ಫೀಚರ್ ಜನರಿಗೆ ಸುಲಭವಾಗಿ ತಲುಪುವ ಹಿನ್ನೆಲೆಯಲ್ಲಿ ಪಾವತಿ ಸೇವೆ ಹಾಗೂ ಗೌಪ್ಯತೆ ನೀತಿ ಬದಲಾವಣೆ ಮಾಡುತ್ತೇವೆ. ಇದನ್ನು ಜಾರಿಗೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ, ಬ್ಯಾಂಕ್ ಹಾಗೂ ಭಾರತೀಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆಂದು ವಾಟ್ಸಾಪ್  ವಕ್ತಾರರು ತಿಳಿಸಿದ್ದಾರೆ.

ಪೇಮೆಂಟ್ ಫೀಚರ್ ಗಾಗಿ ಬದಲಾದ ನೀತಿಯಲ್ಲಿ ಹೆಚ್ಚುವರಿ ಮಾಹಿತಿಯನ್ನು ಪಡೆಯಬಹುದು. ವಾಟ್ಸಾಪ್  ಬಳಕೆದಾರ ಹಾಗೂ ಭೀಮಾ ಯುಪಿಐ ಆ್ಯಪ್ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಬಹುದು ಎಂದು ವಕ್ತಾರರು ತಿಳಿಸಿದ್ದಾರೆ. ಹೊಸ ನೀತಿಯಲ್ಲಿ ಹಣ ಕಳುಹಿಸಿದ ವ್ಯಕ್ತಿ, ಪಡೆದ ವ್ಯಕ್ತಿ, ಸಮಯ, ದಿನ, ವ್ಯವಹಾರದ ಮಾಹಿತಿಯನ್ನು ವಾಟ್ಸಾಪ್  ಪಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...