alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಪ್ಟೆಂಬರ್ 1ರಿಂದ ಆಗಲಿದೆ ಈ ಎಲ್ಲ ಬದಲಾವಣೆ

ಸೆಪ್ಟೆಂಬರ್ 1ರಿಂದ ಸಾಕಷ್ಟು ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ನಾಳೆಯಿಂದ ಯಾವೆಲ್ಲ ಬದಲಾವಣೆಯಾಗಲಿದೆ ಎಂಬುದನ್ನು ತಿಳಿಯುವುದು ಅನಿವಾರ್ಯವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ ನೀಡಲಿದ್ದಾರೆ. ದೇಶದ ಜಿಲ್ಲೆಗಳಲ್ಲಿ ಈ ಬ್ಯಾಂಕ್ ಶಾಖೆ ತೆರೆಯಲಿದೆ. ಇದು ಗ್ರಾಮೀಣ ಪ್ರದೇಶಗಳ ಹಣಕಾಸು ಸೇವೆಗಳನ್ನು ಕೇಂದ್ರೀಕರಿಸಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆ ಒದಗಿಸಲು 1.55 ಲಕ್ಷ ಅಂಚೆ ಕಚೇರಿ ಶಾಖೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು.

ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಉಚಿತ ವಿಮೆ ಸೌಲಭ್ಯ ಸೆಪ್ಟೆಂಬರ್ 1ರಿಂದ ಸಿಗ್ತಿಲ್ಲ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವವರು ವಿಮೆ ಹಣವನ್ನು ನೀಡಬೇಕಾಗುತ್ತದೆ. ರೈಲ್ವೆ ಇಲಾಖೆ ಉಚಿತ ವಿಮೆ ಸೌಲಭ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.

ತಂಬಾಕು ಉತ್ಪನ್ನಗಳು ಹಾಗೂ ಸಿಗರೇಟ್ ಪ್ಯಾಕ್ ಮೇಲೆ ಟೋಲ್ ಫ್ರೀ ನಂಬರ್ ಕಡ್ಡಾಯವಾಗಲಿದೆ. ತಂಬಾಕು ಸೇವನೆ ಬಿಡ ಬಯಸುವವರು ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದ್ರೆ ಉಚಿತ ಸಲಹೆ ಸಿಗಲಿದೆ. ತಂಬಾಕು ಉತ್ಪನ್ನ ಹಾಗೂ ಸಿಗರೇಟ್ ಪ್ಯಾಕ್ ನ ಶೇಕಡಾ 85 ರಷ್ಟು ಭಾಗದಲ್ಲಿ ದೊಡ್ಡ ಚಿತ್ರ, ಸಂದೇಶ ಹಾಗೂ ಎಚ್ಚರಿಕೆ ಮಾಹಿತಿ ಇರಲಿದೆ.

ಮೋಟಾರು ವಿಮೆಯಲ್ಲೂ ಬದಲಾವಣೆಯಾಗಲಿದೆ. ಕಾರು ಹಾಗೂ ಬೈಕ್ ಖರೀದಿದಾರರಿಗೆ ಮೂರು ವರ್ಷ ಹಾಗೂ ಐದು ವರ್ಷದ ಮುಂಗಡ ವಿಮೆ ಮಾಡಿಸುವುದು ಅನಿವಾರ್ಯವಾಗಲಿದೆ. ದೀರ್ಘ ಕಾಲಾವಧಿಯ ಪ್ರೀಮಿಯಂ ಪಾವತಿಯ ಹಿನ್ನೆಲೆಯಲ್ಲಿ ಕಾರು ಹಾಗೂ ಬೈಕ್ ಬೆಲೆಯಲ್ಲಿ ಹೆಚ್ಚಳವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...