alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾಳದ ಮಾವು ಖರೀದಿಗೆ ಮುಂದಾಗಿದೆ ಕೋಕಾ ಕೋಲಾ ಕಂಪನಿ

ಜಾಗತಿಕ ತಂಪು ಪಾನೀಯ ಸಂಸ್ಥೆ ಕೋಕಾ ಕೋಲಾ ಪಶ್ಚಿಮ ಬಂಗಾಳದಿಂದ ಮಾವು ಮತ್ತು ಇತರ ಹಣ್ಣುಗಳನ್ನು ಖರೀದಿಸಲು ಮುಂದಾಗಿದೆ. ಮಾಝಾದಂತಹ ಪಾನೀಯಗಳಿಗೆ ಬಂಗಾಳದ ಮಾವನ್ನು ಬಳಸಲು ಚಿಂತನೆ ನಡೆಸಿದೆ. ಸದ್ಯಕ್ಕೆ ಸ್ಯಾಂಪಲ್ ಗಾಗಿ ಹಣ್ಣುಗಳನ್ನು ತರಿಸಿಕೊಳ್ಳಲಾಗ್ತಿದೆ.

ನಂತರ ಬೇಸಿಗೆಯಲ್ಲಿ ಅಲ್ಲಿನ ತೋಟಗಾರಿಕಾ ಇಲಾಖೆ ಜೊತೆ ಚರ್ಚೆ ನಡೆಸುವುದಾಗಿ ಕೋಕಾ ಕೋಲಾದ ಟಿ.ಕೃಷ್ಣಕುಮಾರ್ ತಿಳಿಸಿದ್ದಾರೆ. ಹಿಮ್ಸಾಗರ್ ಮತ್ತು ಲಂಗ್ರಾ ಸೇರಿದಂತೆ ವಿವಿಧ ತಳಿಯ ಹಣ್ಣುಗಳನ್ನು ಬಳಸಲು ಚಿಂತನೆ ನಡೆದಿದೆ.

ಬಂಗಾಳದ ಮಾವಿನ ಹಣ್ಣುಗಳನ್ನು ಬೆರೆಸಿ ತಯಾರಿಸಿದ ಮಾಝಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಗ್ರಾಹಕರ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದನ್ನು ನೋಡಿಕೊಂಡು ಖರೀದಿ ಮಾಡಲಿದೆ. ಪ್ರತಿವರ್ಷ ಪಶ್ಚಿಮ ಬಂಗಾಳದಲ್ಲಿ 7 ಟನ್ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಈ ವರ್ಷ 10 ಟನ್ ಮ್ಯಾಂಗೋ ಸಿಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...