alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಉಳಿಕೆ ಮಾಡಲು ಇಲ್ಲಿದೆ ‘ಸಿಂಪಲ್’ ಟಿಪ್ಸ್

note-s-500

ಎಷ್ಟೆಲ್ಲಾ ದುಡಿದರೂ ಎಲ್ಲಾ ಖರ್ಚಾಗುತ್ತದೆ. ಕೈಯಲ್ಲಿ ಬಿಡಿಗಾಸು ಉಳಿಯಲ್ಲ. ತಿಂಗಳ ಕೊನೆಗೆ ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪಲ್ಲ ಎಂದು ಬಹುತೇಕರು ಗೊಣಗುತ್ತಾರೆ.

ಇದಕ್ಕೆ ಹಲವು ಕಾರಣಗಳಿವೆ. ಲೆಕ್ಕಪತ್ರವಿಲ್ಲದೇ, ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುವುದು ಕೆಲವರಿಗೆ ಸಲೀಸು. ಕೊನೆಗೆ ಹಣ ಹೇಗೆಲ್ಲಾ ಖರ್ಚಾಗಿದೆ ಎಂದು ಲೆಕ್ಕ ಹಾಕುವುದರಲ್ಲೇ ಕಾಲ ಕಳೆಯುತ್ತಾರೆ.

ಹಣ ಖರ್ಚಾದ ಮೇಲೆ ಲೆಕ್ಕ ಹಾಕುವುದಕ್ಕಿಂತ ಲೆಕ್ಕ ಹಾಕಿ ಖರ್ಚು ಮಾಡುವುದು ಉತ್ತಮ. ನಿಮ್ಮಲ್ಲಿರುವ ಹಣದಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು. ಎಷ್ಟು ಹಣವನ್ನು ಉಳಿಸಬೇಕೆಂದು ಮೊದಲೇ ನಿರ್ಧರಿಸಿ.

ಹಣವನ್ನು ನೀರಿನಂತೆ ಖರ್ಚು ಮಾಡದೇ, ಹಿಡಿತದಿಂದ ಖರ್ಚು ಮಾಡಿ. ನೀರಿನಂತೆ ಅಂದರೆ, ಈಗ ನೀರು ಕೂಡ ಸುಲಭವಾಗಿ ಸಿಗುತ್ತಿಲ್ಲ. ಹಿತಮಿತವಾಗಿ ನೀರನ್ನು ಬಳಸಬೇಕಿದೆ. ಅದೇ ರೀತಿ ಹಣವನ್ನು ಕೂಡ ಹಿತಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಿ.

ಅಲ್ಪ ದುಡಿಮೆಯಲ್ಲೇ ಐಶ್ವರ್ಯವಂತನಂತೆ ಬಾಳಲು ಸಾಧ್ಯವಿದೆ. ಹಣವಿದ್ದಾಗ ಮತ್ತು ಇಲ್ಲದಿದ್ದಾಗ ಒತ್ತಡ ಸಹಜ. ನಿಮ್ಮ ಒತ್ತಡ ಕಡಿಮೆ ಮಾಡಿಕೊಂಡು ಶಾಂತವಾಗಿ ಯೋಚಿಸಿ. ಹಣವನ್ನು ಅವಶ್ಯಕತೆಗೆ ಅನುಗುಣವಾಗಿ ಮಿತವಾಗಿ ಬಳಸಿ. ಇದ್ದುದರಲ್ಲೇ ಉಳಿಸಿ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ನೀವು ಉಳಿಸುತ್ತಾ ಹೋದಂತೆ ನಿಮ್ಮ ಹಣ ಹೆಚ್ಚುತ್ತಾ ಹೋಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...