alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಯ ಹೊಡೆತಕ್ಕೆ ATM ಗಳಿಗೂ ಶುರುವಾಗಿದೆ ನಡುಕ

ಹಿಮಾಚಲ ಪ್ರದೇಶದ ಲೌಹೌಲ್ ಸ್ಪಿತಿ ಜಿಲ್ಲೆಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಶೀತದಿಂದಾಗಿ ಎಟಿಎಂಗಳು ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಎಟಿಎಂಗಳಿಗೆಲ್ಲ ಬೆಚ್ಚನೆಯ ರಗ್ ಗಳನ್ನು ಹೊದೆಸಲಾಗಿದೆ. ಕ್ಯಾಬಿನ್ ಗಳಲ್ಲಿ ಎಲೆಕ್ಟ್ರಿಕ್ ಹೀಟರ್ ಗಳನ್ನು ಅಳವಡಿಸಲಾಗಿದೆ.

ಕೆಲ ಎಟಿಎಂಗಳಲ್ಲಿ ಹಗಲಿನ ಹೊತ್ತು ಸೂರ್ಯನ ಬಿಸಿಲು ಬೀಳುತ್ತದೆ. ಆದ್ರೆ ಬಿಸಿಲ ತೀವ್ರತೆ ತೀರಾ ಕಡಿಮೆ ಇರುವುದರಿಂದ ಎಟಿಎಂಗಳು ಜಡ್ಡುಗಟ್ಟಿವೆ. ಹಾಗಾಗಿ ಹಗಲಿನಲ್ಲಿ ಹೀಟರ್ ಅಳವಡಿಸಲಾಗುತ್ತದೆ. ಸ್ಪಿತಿಯಲ್ಲಂತೂ ಉಷ್ಣಾಂಶ -25 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ.

ಎಷ್ಟು ಕಸರತ್ತು ಮಾಡಿದ್ರೂ ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಚಳಿಯ ತೀವ್ರತೆಯಿಂದಾಗಿ ಎಟಿಎಂ ಪೂರ್ತಿ ಜಾಮ್ ಆಗಿಬಿಟ್ಟಿದೆ. ಹಾಗಾಗಿ ಕೆಲವೆಡೆ ಅನಿವಾರ್ಯವಾಗಿ ಎಟಿಎಂ ಯಂತ್ರಗಳನ್ನು ಬಂದ್ ಮಾಡಿ ಇಡಲಾಗಿದೆ. ಚಳಿಯನ್ನು ತಡೆಯಲು ಎಲ್ಲಾ ಮನೆ ಮತ್ತು ಕಚೇರಿಗಳಲ್ಲಿ ಕೂಡ ಎಲ್ ಪಿ ಜಿ ಹೀಟರ್ ಗಳನ್ನು ಬಳಸಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...