alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 1 ರೂ.ನಲ್ಲಿ ಮಾಡಬಹುದು ವಿಮಾನ ಪ್ರಯಾಣ..!

ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ಕಾರ್ಯಾರಂಭ ಮಾಡುತ್ತಿದೆ. ಕೇವಲ 1 ರೂಪಾಯಿಗೆ ವಿಮಾನ ಪ್ರಯಾಣ ಮಾಡುವ ಅವಕಾಶ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಶಿಲ್ಲಾಂಗ್ ನಲ್ಲಿ ಏರ್ ಡೆಕ್ಕನ್ ಏರ್ ಬೇಸ್ ಗಳಿವೆ.

ಸಣ್ಣಪುಟ್ಟ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವುದು ಸಂಸ್ಥೆಯ ಉದ್ದೇಶ. ಡಿಸೆಂಬರ್ 22ರಂದು ಏರ್ ಡೆಕ್ಕನ್ ನ ಮೊದಲ ವಿಮಾನ ಮುಂಬೈನಿಂದ ನಾಸಿಕ್ ಗೆ ಪ್ರಯಾಣಿಸಲಿದೆ. ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಒಂದು ಗಂಟೆ ಪ್ರಯಾಣಕ್ಕೆ 2500 ರೂ ಶುಲ್ಕ ನಿಗದಿಪಡಿಸಲಾಗಿದೆ.

ಅವರಲ್ಲಿ ಕೆಲವೇ ಕೆಲವು ಅದೃಷ್ಟವಂತರಿಗೆ ಕೇವಲ 1 ರೂಪಾಯಿಗೆ ವಿಮಾನ ಪ್ರಯಾಣ ಮಾಡುವ ಅವಕಾಶ ಸಿಗಲಿದೆ. ಮುಂಬೈನಿಂದ ನಾಸಿಕ್ ಗೆ ತೆರಳಲು ವಿಮಾನ ಟಿಕೆಟ್ ದರ ಕನಿಷ್ಟ 1400 ರೂಪಾಯಿ. ಜನವರಿಯಿಂದ ಆಗ್ರಾ, ಶಿಮ್ಲಾ, ಲುಧಿಯಾನಾ, ಕುಲು, ಡೆಹ್ರಾಡೂನ್ ಗೂ ವಿಮಾನ ಸಂಪರ್ಕ ಕಲ್ಪಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...