alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಹೊಸ ಆಫರ್

vodafone

ಟೆಲಿಕಾಂ ಸಂಸ್ಥೆ ವೊಡಾಫೋನ್ ‘ಸೂಪರ್ ಅವರ್’ ಯೋಜನೆಯೊಂದನ್ನು ಲಾಂಚ್ ಮಾಡಿದೆ. ಪ್ರೀ-ಪೇಯ್ಡ್ ಗ್ರಾಹಕರಿಗಾಗಿಯೇ ಇರುವ ಆಫರ್ ಇದು.

16 ರೂಪಾಯಿ ಕೊಟ್ರೆ ಒಂದು ಗಂಟೆಯ ಕಾಲ ನೀವು ಅನ್ ಲಿಮಿಟೆಡ್ 3ಜಿ, 4ಜಿ ಡೇಟಾ ಬಳಸಬಹುದು. ಅಷ್ಟೇ ಅಲ್ಲ 7 ರೂಪಾಯಿಗೆ ವೊಡಾಫೋನ್ ನಿಂದ ವೊಡಾಫೋನ್ ನಂಬರ್ ಗೆ ಕರೆ ಮಾಡಿ ನೀವು ಎಷ್ಟು ಬೇಕಾದ್ರೂ ಮಾತನಾಡಬಹುದು, ಆದ್ರೆ ಈ ಆಫರ್ ಕೂಡ ಕೇವಲ ಒಂದು ಗಂಟೆಗೆ ಮಾತ್ರ ಸೀಮಿತ.

ಸೂಪರ್ ಅವರ್ ಪ್ಲಾನ್ ನಲ್ಲಿ ಒಂದು ಗಂಟೆ ಕಾಲ ಎಷ್ಟು ಬೇಕಾದ್ರೂ ಡೌನ್ ಲೋಡ್ ಮಾಡಬಹುದು, ಇಂಟರ್ನೆಟ್ ಬ್ರೌಸ್ ಮಾಡಬಹುದು. ಇವತ್ತಿನಿಂದ್ಲೇ ಈ ಕೊಡುಗೆ ಪ್ರಾರಂಭವಾಗಿದ್ದು ಜನವರಿ 9ರವರೆಗೂ ಲಭ್ಯವಾಗಲಿದೆ. ಆದ್ರೆ ದರ ಕೊಂಚ ಹೆಚ್ಚು ಕಡಿಮೆಯಾಗಬಹುದು ಅಂತಾ ಕಂಪನಿ ತಿಳಿಸಿದೆ.

ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಚತ್ತೀಸ್ಗಢ, ಪಂಜಾಬ್, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಆಫರ್ ದೊರೆಯುವುದಿಲ್ಲ. ಈ ಯೋಜನೆ ಅಡಿಯಲ್ಲಿ 2 ಜಿ ಗ್ರಾಹಕರಿಗೆ 5 ರೂಪಾಯಿಗೆ ಒಂದು ಗಂಟೆಗೆ ಸೀಮಿತವಾದ ಅನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಮಾರ್ಚ್ 31ರವರೆಗೆ ‘ವೊಡಾಫೋನ್ ಪ್ಲೇ’ ಸಬ್ ಸ್ಕ್ರಿಪ್ಷನ್ ಉಚಿತವಾಗಿರೋದ್ರಿಂದ ಅದರಲ್ಲೂ ವಿಡಿಯೋ, ಸಿನಿಮಾ ವೀಕ್ಷಿಸಬಹುದು.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...