alex Certify
ಕನ್ನಡ ದುನಿಯಾ       Mobile App
       

Kannada Duniya

99 ರೂ. ರಿಚಾರ್ಜ್ ಮಾಡಿ ಎಷ್ಟು ಬೇಕಾದ್ರೂ ಮಾತನಾಡಿ

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬರ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಬಾಂಬ್ ಸಿಡಿದಿತ್ತು. ಆಗ ಶುರುವಾದ ಅನಿಯಮಿತ ಕರೆ ಹಾಗೂ ಡೇಟಾ ಯುದ್ಧ ಈಗ್ಲೂ ಮುಂದುವರೆದಿದೆ. ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್, ವೋಡಾಫೋನ್, ಬಿಎಸ್ಎನ್ಎಲ್ ಹಾಗೂ ಐಡಿಯಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿವೆ. ಈಗ ವೋಡಾಫೋನ್ ಸರದಿ.

ವೋಡಾಫೋನ್ 99 ರೂಪಾಯಿಗೆ ಅನಿಯಮಿತ ಕರೆ ಪ್ಲಾನ್ ಶುರು ಮಾಡಿದೆ. ಪ್ರೀಪೇಯ್ಡ್ ಗ್ರಾಹಕರು ಇದ್ರ ಲಾಭ ಪಡೆಯಬಹುದಾಗಿದೆ. ವೋಡಾಫೋನ್ ನ ಈ ಪ್ಲಾನ್, ಜಿಯೋದ 98 ಪ್ಲಾನ್ ಗೆ ಟಕ್ಕರ್ ನೀಡುವುದಾಗಿದೆ. ಜಿಯೋದಲ್ಲಿ ಕರೆ ಜೊತೆ ಗ್ರಾಹಕರಿಗೆ ಡೇಟಾ ಕೂಡ ಸಿಗ್ತಿದೆ.

99 ರೂಪಾಯಿ ಪ್ಲಾನ್ ನಲ್ಲಿ ವೋಡಾಫೋನ್ ಗ್ರಾಹಕ ದಿನಕ್ಕೆ 250 ನಿಮಿಷ ಹಾಗೂ ಒಂದು ವಾರಕ್ಕೆ 1,000 ನಿಮಿಷ ಉಚಿತವಾಗಿ ಕರೆ ಮಾಡಬಹುದಾಗಿದೆ. ವೋಡಾಫೋನ್ ಅಧಿಕೃತ ಆಪ್ ಹಾಗೂ ವೆಬ್ಸೈಟ್ ನಲ್ಲಿ ಈ ಪ್ಲಾನ್ ಲಭ್ಯವಿದೆ. 99 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿರಲಿದೆ. ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯವನ್ನು ಇದು ನೀಡ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...