alex Certify
ಕನ್ನಡ ದುನಿಯಾ       Mobile App
       

Kannada Duniya

1 ಗಂಟೆಗೆ ಅನಿಯಮಿತ ಡೇಟಾ ನೀಡ್ತಿದೆ ಈ ಕಂಪನಿ

ರಿಲಾಯನ್ಸ್ ಜಿಯೋ ಪೈಪೋಟಿ ಮಧ್ಯೆ ವೋಡಾಫೋನ್ ಪ್ರಿಪೇಯ್ಡ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ಒಂದು ದಿನದ ವ್ಯಾಲಿಡಿಟಿ ಈ ಪ್ಲಾನ್ ನಲ್ಲಿ ಒಂದು ಗಂಟೆ ಅನಿಯಮಿತ 3ಜಿ/4ಜಿ ಡೇಟಾ ಸಿಗಲಿದೆ. ಈ ಯೋಜನೆ ಬೆಲೆ 21 ರೂಪಾಯಿಯಾಗಿದ್ದು, ಇದು ಜಿಯೋದ 19 ರೂಪಾಯಿ ಪ್ಲಾನ್ ಗೆ ಪೈಪೋಟಿ ನೀಡಲಿದೆ.

ಜಿಯೋ 19 ಪ್ಲಾನ್ ನಲ್ಲಿ 150 ಎಂಬಿ 4ಜಿ ಡೇಟಾ ಸಿಗ್ತಿದೆ. ಇದ್ರ ವ್ಯಾಲಿಡಿಟಿ ಒಂದು ದಿನವಾಗಿದೆ. ಅನಿಯಮಿತ ಕರೆ, 20 ಎಸ್ ಎಂ ಎಸ್, ಜಿಯೋ ಆ್ಯಪ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 21 ರೂಪಾಯಿ ಪ್ಲಾನ್ ಶುರು ಮಾಡಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಡೇಟಾ ಬಳಕೆ ಮಾಡುವವರಿಗೆ ಇದು ಉಪಯೋಗವಾಗಲಿದೆ.

ಕೆಲ ದಿನಗಳ ಹಿಂದಷ್ಟೇ ವೋಡಾಫೋನ್ 299 ರೂಪಾಯಿ ಯೋಜನೆ ಶುರು ಮಾಡಿದೆ. ಮಧ್ಯ ಪ್ರದೇಶ ಹಾಗೂ ಛತ್ತೀಸ್ಗಢ ಗ್ರಾಹಕರಿಗೆ ಮಾತ್ರ ಇದು ಲಭ್ಯವಾಗಲಿದೆ. ಈ ಯೋಜನೆಯಲ್ಲಿ ವೋಡಾಫೋನ್ ಗ್ರಾಹಕರಿಗೆ 3ಜಿ, 4ಜಿ ಬದಲು 2ಜಿ ಡೇಟಾ ಪ್ಲಾನ್ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...